• Slide
    Slide
    Slide
    previous arrow
    next arrow
  • ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಿದ್ರಕಾನ ಪ್ರೌಢಶಾಲೆ‌ ನೂರಕ್ಕೆ ನೂರು ಸಾಧನೆ.

    300x250 AD

    ಸಿದ್ದಾಪುರ: ಜುಲೈ ತಿಂಗಳಿನಲ್ಲಿ ನಡೆದ 2020-21 ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಎಮ್. ಜಿ. ಸಿ. ಎಮ್. ಪ್ರೌಢಶಾಲೆ, ಬಿದ್ರಕಾನ, ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ನೂರಕ್ಕೆ ನೂರಷ್ಟು ಫಲಿತಾಂಶ ಸಾಧಿಸಿದೆ.
    ಪರೀಕ್ಷೆಗೆ ಹಾಜರಾಗಿದ್ದ 34 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದು, ಪ್ರೌಢಶಾಲೆಯ ಗುಣಾತ್ಮಕ ಫಲಿತಾಂಶವು 87.33% ಆಗಿದ್ದು, A ಗ್ರೇಡ್ ಆಗಿದೆ. 

    ಅನುಷಾ ಎಸ್. ಭಟ್ಟ 97.76% ಪಡೆದು ಪ್ರಥಮ ಸ್ಥಾನ ಪಡೆದರೆ ನಾಗೇಂದ್ರ ಎಮ್. ಹೆಗಡೆ 97.44% ನೊಂದಿಗೆ ದ್ವಿತೀಯ ಸ್ಥಾನ, ಮಹಿಮಾ ಯು. ಹೆಗಡೆ 96.8% ಪಡೆದು ಮೂರನೇ ಸ್ಥಾನ, ಮಧುಕೇಶ ಎನ್. 93.44% ನಾಲ್ಕನೇ ಸ್ಥಾನವನ್ನು ಮತ್ತು ರಾಜೇಶ ಎಮ್. ಹೆಗಡೆ 89.12% ಪಡೆದುಕೊಂಡು ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಉನ್ನತ ದರ್ಜೆಯಲ್ಲಿ 6 ವಿದ್ಯಾರ್ಥಿಗಳು ಮತ್ತು ಪ್ರಥಮ ದರ್ಜೆಯಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

    300x250 AD

    ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಹರ್ಷವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top