• first
    second
    third
    previous arrow
    next arrow
  • ರಾಜ್ಯಮಟ್ಟದಲ್ಲಿ 3 ಸ್ಥಾನ ಬಾಚಿಕೊಂಡ ಶ್ರೀಶಾರದಾಂಬಾ ಪ್ರೌಢಶಾಲೆ

    300x250 AD

    ಶಿರಸಿ: ತಾಲೂಕಿನ ಗ್ರಾಮಾಂತರ ಭಾಗದ ಬಹುತೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರೌಢಶಾಲೆ ಎನಿಸಿರುವ ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೂರು, ನಾಲ್ಕು ಹಾಗು ಐದನೇ ರ‌್ಯಾಂಕ್ ಪಡೆದು ಶಾಲೆಗೆ ಕೀರ್ತಿ, ತಾಲೂಕಿಗೆ ಹೆಗ್ಗಳಿಕೆ ತಂದಿದ್ದಾರೆ.

    ಕು. ತನಯ ಹೆಗಡೆ 621 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕು. ಶ್ರೀಪಾದ ಹಂಗಾರಿ 619 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಮತ್ತು ಶಾಲೆಗೆ ದ್ವಿತೀಯನಾಗಿದ್ದಾನೆ. ಕು.‌ ಶ್ರೀಕೃಷ್ಣ ಹೆಗಡೆ 617 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಐದನೇ ಮತ್ತು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.

    ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಮುಂದು:

    ಗ್ರಾಮೀಣ ಭಾಗದಲ್ಲಿದ್ದರೂ ಸಹ, ಸದಾ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ, ಮಕ್ಕಳ ಪ್ರಗತಿಗೆ ಅವಶ್ಯವಿರುವ ಕ್ರೀಯಾಶೀಲ ಮತ್ತು ನವನವೀನ ಚಟುವಟಿಕೆಗಳ ಜೊತೆಗೆ ಪಠ್ಯೇತರ-ಕ್ರೀಡೆ ಸೇರಿದಂತೆ ವಿವಿಧ ವಿಷಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಪೋಷಿಸುವ ಕಾರ್ಯ ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಶಾಲೆ ಮಾಡುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯಕ್ಕೆ ಸ್ಥಾನ ಪಡೆಯುವುದರ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

    300x250 AD

    ಅಪರೂಪದ ಖಗೋಳ ವೀಕ್ಷಣೆ, ವಿಷಯ ತಜ್ಞರಿಂದ ಕಾರ್ಯಕ್ರಮ ಆಯೋಜನೆ:

    ಪ್ರೌಢಶಾಲೆಯು ಮಕ್ಕಳ ಅಭಿರುಚಿಯನ್ನು ಹೆಚ್ಚಿಸುವ ಸ್ಥಳವಾಗಿದ್ದು, ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿಯೇ ಒಂದಷ್ಟು ಕುತೂಹಲ ಮತ್ತು ಮಾಹಿತಿಯುಕ್ತ ವಿಷಯವನ್ನು ಮಸ್ತಕದೊಳಗೆ ತುಂಬಿದರೆ, ಖಂಡಿತ ಅವರ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ. ಅಂತಹ ಅಪರೂಪದ ವಿಷಯಕ್ಕೆ ಅನುರೂಪವೆಂಬಂತೆ ಖಗೋಳ ವೀಕ್ಷಣೆ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಸೆಮಿನಾರ್, ವಿಜ್ಞಾನಿಗಳಿಂದ ಕ್ರಿಯಾತ್ಮಕ ತರಬೇತಿ ಮತ್ತು ಮಾಹಿತಿ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣದಾಯಿ ಕಾರ್ಯವನ್ನು ಶಾರದಾಂಬಾ ಪ್ರೌಢಶಾಲೆಯು ಮಾಡುತ್ತಿದೆ ಎಂಬುದು ವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top