• first
    second
    third
    previous arrow
    next arrow
  • ಆ. 9 ಕ್ಕೆ ಜಿಲ್ಲೆಯಲ್ಲಿ 29 ಕರೋನಾ ಪಾಸಿಟಿವ್; 64 ಮಂದಿ ಗುಣಮುಖ, 2 ಸಾವು

    300x250 AD

    ಜಿಲ್ಲೆಯಲ್ಲಿ ಆ.9 ಸೋಮವಾರ 29 ಕರೋನಾ ಪಾಸಿಟಿವ್ ದಾಖಲಾಗಿದ್ದು 64 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    ಅವುಗಳಲ್ಲಿ ಕಾರವಾರದಲ್ಲಿ 2, ಅಂಕೋಲಾ 5, ಕುಮಟಾ 7, ಹೊನ್ನಾವರ 4, ಭಟ್ಕಳ 5, ಶಿರಸಿ 3, ಸಿದ್ದಾಪುರ 1, ಮುಂಡಗೋಡದಲ್ಲಿ 2 ಸೇರಿದಂತೆ ಒಟ್ಟೂ 29 ಕರೋನಾ ಪಾಸಿಟಿವ್ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 442 ಸಕ್ರಿಯ ಪ್ರಕರಣಗಳಿದ್ದು 77 ಮಂದಿ ಆಸ್ಪತ್ರೆಯಲ್ಲಿ 365 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕುಮಟಾದಲ್ಲಿ 1 ಹಾಗೂ ಶಿರಸಿಯಲ್ಲಿ ಒಬ್ಬರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    300x250 AD

    ಇನ್ನು ಜಿಲ್ಲೆಯಾದ್ಯಂತ ಇಂದು 64 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 5, ಅಂಕೋಲಾ 32, ಕುಮಟಾ 8, ಹೊನ್ನಾವರ 13, ಭಟ್ಕಳ 4 ಹಾಗೂ ಹಳಿಯಾಳ ಹಾಗೂ ಜೊಯಿಡಾದಲ್ಲಿ ತಲಾ‌ ಒಬ್ಬರು ಕರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    ಜಿಲ್ಲೆಯಲ್ಲಿ‌ ಇಲ್ಲಿಯವರೆಗೆ 53,676 ಜನರಿಗೆ ಸೋಂಕು ತಗುಲಿದ್ದು ಒಟ್ಟೂ 52,494 ಮಂದಿ ಗುಣಮುಖರಾಗಿದ್ದಾರೆ. ಮತ್ತು ಒಟ್ಟೂ 740 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top