ಶಿರಸಿ: 2020-21 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ರಾಜ್ಯದ ಮೊದಲ ಹತ್ತು ಸ್ಥಾನಗಳಲ್ಲಿ 7 ವಿದ್ಯಾರ್ಥಿಗಳು ಸ್ಥಾನಗಳಿಸಿ, ಶಾಲೆಯ ರ‍್ಯಾಂಕ್ಸ್ ಸಂಸ್ಕೃತಿಯು ಮುಂದುವರೆಸಿದ್ದಾರೆ. ಶಿರಸಿ ಲಯನ್ಸ್ ಶಾಲೆಯು ಕಳೆದ 7 ವರ್ಷಗಳಿಂದ ಸತತ ರಾಜ್ಯಮಟ್ಟದ 10 ರ‍್ಯಾಂಕ್ಸ್‌ನಲ್ಲಿ 5 ಕ್ಕಿಂತ ಅಧಿಕ ರ‍್ಯಾಂಕ್ಸ್ ಪಡೆಯುತ್ತಾ ಬಂದಿದೆ.
625ಕ್ಕೆ 623 ಅಂಕಗಳಿಸಿದ ರಜತಾ ಎಮ್ ಹೆಗಡೆ ರಾಜ್ಯಮಟ್ಟದಲ್ಲಿ 2 ನೇ ಸ್ಥಾನ ಹಾಗೂ ಶಾಲೆಗೆ ಪ್ರಥಮ ಸ್ಥಾನ, 621 ಅಂಕ ಗಳಿಸಿದ ದಿವ್ಯಾ ವಿನಾಯಕ ಗಾಂವಕರ್ ರಾಜ್ಯಮಟ್ಟದಲ್ಲಿ 3 ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ, 619 ಅಂಕಗಳಿಸಿರುವ ಸಾಕ್ಷಿ ಭಟ್, ಸಿರಿ ಹರೀಶ್ ನಾಯಕ, ಕವನಾ ವಿಜಯ ಹೆಗಡೆ ರಾಜ್ಯಕ್ಕೆ 5 ನೇ ಸ್ಥಾನ ಶಾಲೆಗೆ ತೃತೀಯ ಸ್ಥಾನ, 615 ಅಂಕಗಳಿಸಿರುವ ಪ್ರಣವ್ ರವೀಂದ್ರ ಹೆಗಡೆ ರಾಜ್ಯಮಟ್ಟದಲ್ಲಿ 9 ನೇ ಸ್ಥಾನ ಹಾಗೂ ಶಾಲೆಗೆ 4 ನೇ ಸ್ಥಾನ, 614 ಅಂಕಗಳಿಸಿದ ಚಂದನ ಪ್ರಕಾಶ ಹೆಗಡೆ ರಾಜ್ಯಕ್ಕೆ 10 ನೇ ಸ್ಥಾನ, ಶಾಲೆಗೆ 5 ನೇ ಸ್ಥಾನ ಪಡೆದುಕೊಂಡು, ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಶಾಲೆಯಿಂದ ಪರೀಕ್ಷೆಗೆ ಕುಳಿತ 107 ವಿದ್ಯಾರ್ಥಿಗಳಲ್ಲಿ 95 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು 26 ವಿದ್ಯಾರ್ಥಿಗಳು, 90% ಅಧಿಕ ಅಂಕಗಳನ್ನು 49 ವಿದ್ಯಾರ್ಥಿಗಳು, 85% ಅಧಿಕ ಅಂಕಗಳನ್ನು 59 ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ವರ್ಗದಲ್ಲಿ 40 ವಿದ್ಯಾರ್ಥಿಗಳು, ದ್ವಿತೀಯ ವರ್ಗದಲ್ಲಿ 9 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. A+ ಶ್ರೇಣಿ 48 ವಿದ್ಯಾರ್ಥಿಗಳು, A ಶ್ರೇಣಿ 21 ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿಷಯವಾರು ಇಂಗ್ಲೀಷ್‌ನಲ್ಲಿ 2, ಕನ್ನಡ 35, ಹಿಂದಿ 14, ಸಂಸ್ಕೃತ 9 ಗಣಿತ 10, ವಿಜ್ಞಾನ 10, ಸಮಾಜ ವಿಜ್ಞಾನ 6 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು, ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.