ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಕೆಳಾಸೆ ಭಾಗದಲ್ಲಿ ನೆರೆಯಿಂದಾಗಿ ಹಾನಿಗೊಳಗಾದ ಬಾಳೆಪಾಲ್ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದು ಬುಡಕಟ್ಟು ಸಿದ್ದಿ ಜನರು ವಾಸಿಸುವ ಪ್ರದೇಶವಾಗಿದ್ದು ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮನೆಯ ಮೇಲೆ ಗುಡ್ಡಕುಸಿದು ಹಾನಿಗೊಳಗಾದ ಅತ್ತಿಸಾವಲು ವೆಂಕಟ್ರಮಣ ಭಟ್ ರವರ ಮನೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜೀವನ್ ವಿಕಾಸ ಟ್ರಸ್ಟ್ ಹಾಗೂ ಎಸ್.ಟಿ ಮೊರ್ಚ ಜಿಲ್ಲಾ ಕಾರ್ಯದರ್ಶಿ ಸುರೇಶ ಸಿದ್ದಿ, ವನವಾಸಿ ಕಲ್ಯಾಣದ ರಾಮನಗರ ಜಿಲ್ಲಾ ಪ್ರಮುಖ ಕುಮಾರ ವಿಠ್ಠಲ ತಾಟೆ, ಶಂಕರ ಸಿದ್ದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು