ಬೆಂಗಳೂರು: 2020-21 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಶವನ್ನು ಇಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರಕಟ ಮಾಡಿದ್ದು, ಶೇ.99.9 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜುಲೈ 19 ಮತ್ತು 22ಕ್ಕೆ ಪರೀಕ್ಷೆ ನಡೆದಿದ್ದು, 8.76 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಶವನ್ನು hslc.karnataka.gov.in, kseeb.kar.nic.in ವೆಬ್‍ಸೈಟ್‍ನಲ್ಲಿ ನೋಡಬಹುದಾಗಿದೆ.
ಒಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಬೇರೊಬ್ಬರು ಪರೀಕ್ಷೆ ಬರೆದಿದ್ದರು ಎಂಬುದು ತಿಳಿದು ಬಂದಿದೆ. ಹಾಗಾಗಿ ಓರ್ವ ಅನುತ್ತೀರ್ಣನಾಗಿದ್ದಾನೆ.
ಪರೀಕ್ಷೆ ಬರೆದವರು: ಗಂಡು ಮಕ್ಕಳು-407161 ಪರೀಕ್ಷೆಗೆ ಕುಳಿತ ಎಲ್ಲರೂ ಉತ್ತೀರ್ಣ, ಹೆಣ್ಣು ಮಕ್ಕಳು-401282 (401281 ಬಾಲಕಿಯರು ಉತ್ತೀರ್ಣ-ಒಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಬೇರೊಬ್ಬರು ಪರೀಕ್ಷೆ ಬರೆದಿದ್ದರು.)
ಫಲಿತಾಂಶ ಹೀಗಿದೆ ನೋಡಿ:
A+-=128931 (ಶೇ. 16) A = 250317 (ಶೇ 32.07)
B =287684 (8e 36.86)
C=113610 (8 14.55)
625 ಕ್ಕೆ 625 ಅಂಕವನ್ನು 157 ವಿದ್ಯಾರ್ಥಿಗಳು, 289 ವಿದ್ಯಾರ್ಥಿಗಳು-623 ಅಂಕವನ್ನು, 2 ವಿದ್ಯಾರ್ಥಿಗಳು 622 ಅಂಕವನ್ನು, 449 ವಿದ್ಯಾರ್ಥಿಗಳು 622 ಅಂಕವನ್ನು, 449 ವಿದ್ಯಾರ್ಥಿಗಳು -621 ಅಂಕವನ್ನು, 28 ವಿದ್ಯಾರ್ಥಿಗಳು -620 ಅಂಕ ಪಡೆದುಕೊಂಡಿದ್ದಾರೆ.