ಯಲ್ಲಾಪುರ: ಅಪ್ರಾಪ್ತೆಯೊಂದಿಗೆ ಬಲತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 11 ವರ್ಷ ಜೈಲು ಹಾಗೂ 25 ಸಾವಿರ ರೂ ದಂಡವನು ್ನವಿಧಿಸಿ, ಕಾರವಾರ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ತಾಲೂಕಿನ ಬಾಳೆಜಡ್ಡಿಯ ನಿವಾಸಿ ಆರೋಪಿತ ರಾಘವೇಂದ್ರ ಮಂಜ ಚಲವಾದಿ 2018 ರಲ್ಲಿ ಆರೋಪಿಯ ಮನೆಗೆ ಅಕ್ಕನ ಮದುವೆಯ ತಯಾರಿ ಸಂಬಂಧ ಬಂದಿದ್ದ ಅಪ್ರಾಪ್ತೆಯನ್ನು ಆರೋಪಿ ಜೀವಬೆದರಿಕೆ ಹಾಕಿ ಬಲತ್ಕಾರವಾಗಿ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಿ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಕೂಲಂಕುಶವಾಗಿ ವಿಚಾರಣೆ ನಡೆಸಿ ಇದೀಗ ನ್ಯಾಯಾಲಯ ತೀರ್ಪು ನೀಡಿದೆ.