ಯಲ್ಲಾಪುರ : ‘ಸ್ತನ್ಯಪಾನದಿಂದಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದಲ್ಲದೇ, ಮಗು ಮತ್ತು ತಾಯಿ ನಡುವೆ ಅವಿನಾಭಾವ ಭಾಂದವ್ಯ ಹೆಚ್ಚುತ್ತದೆ. ಹೀಗಾಗಿ ಖಡ್ಡಾಯವಾಗಿ ಮಗುವಿಗೆ ಒಂದು ವರ್ಷವಾಗುವವರೆಗೂ ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸಲೇಬೇಕು’ ಎಂದು ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಡಾ. ಸುಚೇತಾ ಮದ್ಗುಣಿ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮೂದಾಯ ಆರೋಗ್ಯಾಧಿಕಾರಿಗಳಾದ ಗಿರಿಜಾ ಶಿವಣ್ಣನವರ್, ಮಂಜುಳಾ ಸುಲದಾಳ, ಶೂಶ್ರೂಶಾಧಿಕರಿ ಮೈತ್ರಿ ಎಸ್. ಅಂಗನವಾಡಿ ಶಿಕ್ಷಕಿ ಗೀತಾ ಹೆಗಡೆ ವೇದಿಕೆಯಲ್ಲಿದ್ದರು. ಆಶಾ ಕಾರ್ಯರ್ತೆಯರು, ತಾಯಂದಿರು, ಸಾರ್ವಜನಿಕರು ಕಾರ್ಯಕ್ರಮದಲ್ಲಿದ್ದರು.