ಕಾರವಾರ: ತಮ್ಮ ನಾಣ್ಯ ಸಂಗ್ರಹದ ಹವ್ಯಾಸದಿಂದಾಗಿ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ-2021 ಗೆ ತಾಲೂಕಿನ ವಾಸುದೇವ ಅನಂತ ಹರ್ಚಕರ್ ಆಯ್ಕೆಯಾಗಿದ್ದಾರೆ.
ಮೂರು ವರ್ಷಗಳಿಂದ ವಿವಿಧ ನಾಣ್ಯ ಸಂಗ್ರಹಿಸುವ ಹವ್ಯಾಸದಲ್ಲಿ ತೊಡಗಿಕೊಂಡಿರುವ ವಾಸುದೇವ್ ಬಳಿ ವಿವಿಧ ದೇಶದ ಸಾವಿರಕ್ಕೂ ಹೆಚ್ಚು ನಾಣ್ಯಗಳ ಸಂಗ್ರಹವಿದೆ.ಅಲ್ಲದೇ ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ಆಣೆ, ಟಾಂಗಾ, ಬಿಲ್ಲಿ ಹಾಗೂ 5,10, 20 ಪೈಸೆಗಳ ನಾಣ್ಯವನ್ನೂ ಇವರು ಕಲೆ ಹಾಕಿದ್ದಾರೆ.
ಹಾಗೂ 2006 ರಿಂದ 2020 ರವರೆಗೆ ಭಾರತ ಸರ್ಕಾರವು ಬಿಡುಗಡೆಗೊಳಿಸಿದ 21ರೀತಿಯ ನಾಣ್ಯಗಳನ್ನು ಇವರು ಸಂಗ್ರಹಿಸಿದ್ದಾರೆ.
ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ B.ed ಅಂತಿಮ ವರ್ಷದಲ್ಲಿ ಓದುತ್ತಿರುವ ವಾಸುದೇವ್ ಅವರ ಈ ವಿಶಿಷ್ಟ ಹವ್ಯಾಸಕ್ಕೆ ಪ್ರಶಸ್ತಿ ಸಂದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ