ಭಟ್ಕಳ: ಇಲ್ಲಿನ ಶಿರಾಲಿಯ ‘ತಾಮ್ರ’ ರೆಸ್ಟೋರೆಂಟ್ ನಲ್ಲಿ ಚಿನ್ನದ ಹುಡುಗ ‘ನೀರಜ್ ಛೋಪ್ರಾ’ ರವರ ಸಾಧನೆಗೆ ಅಭಿನಂದನಾ ಪೂರ್ವಕವಾಗಿ ವಿಶಿಷ್ಟ ಕೊಡುಗೆ ನೀಡಲಾಗಿದೆ.
ಇನ್ನು ಮುಂದೆ ‘ನೀರಜ್ ‘ ಹೆಸರಿನ ಯಾರೇ ಈ ರೆಸ್ಟೋರೆಂಟ್ ಗೆ ಬಂದರೂ ಅವರಿಗೆ ಅನ್ ಲಿಮಿಟೆಡ್ ಊಟ ವನ್ನು ಉಚಿತವಾಗಿ ನೀಡಲಾಗುವುದು ಆ ಮೂಲಕ ನೀರಜ್ ಛೋಪ್ರಾ ರ ಹೆಸರು ಜನರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿಡಲು ಪ್ರಯತ್ನಿಸಲಾಗುವುದು ಆಮೂಲಕ ನೀರಜ್ ಛೋಪ್ರಾ ರವರ ಸಾಧನೆಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ರೆಸ್ಟೋರೆಂಟ್ ನ ಮಾಲಿಕ ಆಶೀಶ್ ನಾಯಕ್ ಹೇಳಿದ್ದಾರೆ.
ದೇಶಕ್ಕೆ ಕೊಡುಗೆ ಸಲ್ಲಿಸಿದ ವ್ಯಕ್ತಿಗಳ ಹೆಸರನ್ನು ಜನಮಾನಸದಲ್ಲಿ ಸದಾ ನೆನಪಿರುವಂತೆ ಮಾಡಲು ಇಂತಹ ಕ್ರಿಯೇಟಿವ್ ಕೆಲಸಗಳು ಪೂರಕವಾಗುತ್ತದೆ ಎಂಬುದಂತೂ ಸತ್ಯ