• first
    second
    third
    previous arrow
    next arrow
  • ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆ ನಿಷೇಧ

    300x250 AD

    ಜೋಯಿಡಾ: ಕಾಳಿ ನದಿಯಲ್ಲಿ ನಡೆಸುವ ರಿವರ್ ರಾಫ್ಟಿಂಗ್ ಮತ್ತು ಜಲ ಸಾಹಸ ಕ್ರೀಡೆಗಳನ್ನು ನಿಯಂತ್ರಿಸುವಂತೆ ಕಾರವಾರ ಸಹಾಯಕ ಕಮೀಷನರ್ ರವಿವಾರ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೊವಿಡ್ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಲ ಕ್ರೀಡೆ ಮತ್ತು ಜಲ ಸಾಹಸ ಕ್ರೀಡೆಗಳನ್ನು ಮುಂದಿನ ಆದೇಶದ ತನಕ ನಿಷೇಧಿಸಲಾಗಿದೆ.

    300x250 AD


    ಪ್ರವಾಸೋದ್ಯಮ ಇಲಾಖೆಯಿಂದಲೂ ಸಹ ಈ ಚಟುವಟಿಕೆಗಳನ್ನ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ಸಂಬಂಧಿಸಿದ ಜಲ ಸಾಹಸ ಕ್ರೀಡೆ ನಡೆಸುವ ಮಾಲೀಕರಿಗೆ ತಿಳಿಸಲಾಗಿದೆ. ಕ್ರೀಡೆಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಉಪ ಪೆÇಲೀಸ್ ಅಧೀಕ್ಷಕರಿಗೆ ತಿಳಿಸಲಾಗಿದೆ. ಇದನ್ನು ನಿಯಂತ್ರಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲು ಸೂಚನೆ ನೀಡಲಾಗಿದೆ. ಸರಕಾರದ ಆದೇಶದ ಕಡ್ಡಾಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ಈ ಕುರಿತಂತೆ ಸರಕಾರದ ಆದೇಶ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಜೋಯಿಡಾ ತಹಸೀಲ್ದಾರರಿಗೆ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top