ಶಿರಸಿ: ‘ಟೀಮ್ ಆತ್ಮೀಯ’ ಎಂಬ ಹೆಸರಿನ ಯುವಕರ ತಂಡವೊಂದು 1,000 ಗಿಡ ನೆಡುವ ಗುರಿಯೊಂದಿಗೆ 250 ಗಿಡಗಳನ್ನು ನೆಡುವ ಮೂಲಕ ಯುವ ಸಮಾಜಕ್ಕೆ ಮಾದರಿಯಾಗುವಂತ ಕೆಲಸ ಮಾಡುತ್ತಿದೆ.
ಭಾನುವಾರ ಶಾಲ್ಮಲಾ ನದಿ ತೀರದಲ್ಲಿ 250 ಗಿಡಗಳನ್ನು ತಂಡದ ಸದಸ್ಯರು ನೆಟ್ಟಿದ್ದು 1,000 ಗಿಡ ನೆಡುವ ಗುರಿಗೆ ಪ್ರಾರಂಭ ನೀಡಿದ್ದಾರೆ.
ಈ ಕುರಿತು ತಂಡವು ಪ್ರತಿಕ್ರಿಯೆ ನೀಡಿದ್ದು ಇತ್ತೀಚಿಗೆ ಚರ್ಚೆಯಲ್ಲಿರುವ ಶಿರಸಿ-ಕುಮಟಾ ಹೆದ್ದಾರಿ ನಿರ್ಮಾಣದಿಂದ ಅಮೂಲ್ಯವಾದ ಸಾವಿರಾರು ಗಿಡಮರಗಳನ್ನು ನಾವು ಕಳೆದುಕೊಳ್ಳಲಿದ್ದೇವೆ, ಇದಕ್ಕೆ ಪ್ರಾಯಶ್ಚಿತವಾಗಿ ನಾವು ಈ ಕಾರ್ಯ ಮಾಡುತ್ತಿದ್ದೇವೆ. ಮನುಷ್ಯನ ಜೀವನಕ್ಕೆ ಗಿಡಮರಗಳು ನೀಡುವಷ್ಟು ಕೊಡುಗೆ ಮತ್ತಾರೂ ನೀಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಕುರಿತು ಗಮನ ಹರಿಸಬೇಕಿದೆ ಎಂದು ತಂಡದ ಸದಸ್ಯರುಅಭಿಪ್ರಾಯ ಪಟ್ಟಿದ್ದಾರೆ.