• first
  second
  third
  previous arrow
  next arrow
 • ಪ್ಲಾಸ್ಟಿಕ್ ತ್ರಿವರ್ಣ ಧ್ವಜ ಬಳಸದಿರಿ; ಕೇಂದ್ರ ಗೃಹಸಚಿವಾಲಯ ಮನವಿ

  300x250 AD

  ನವದೆಹಲಿ: ಸ್ವಾತಂತ್ರ್ಯ ದಿನದಲ್ಲಿ ಜೈವಿಕ ವಿಘಟನೆಗೆ ಸಾಧ್ಯವಾಗದ ಪ್ಲಾಸ್ಟಿಕ್ ತ್ರಿವರ್ಣ ಧ್ವಜಗಳನ್ನು ಬಳಕೆ ಮಾಡದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

  ರಾಷ್ಟ್ರಧ್ವಜ ಅತ್ಯಂತ ಗೌರವಯುತವಾದ ವಿಚಾರ. ಅದು ದೇಶದ ಜನರ ಭರವಸೆ, ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಸರ್ಕಾರದ ಸಂಸ್ಥೆಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ಪ್ಲಾಸ್ಟಿಕ್ ಧ್ವಜಗಳು ವಿಘಟನೆಯಾಗುವುದಿಲ್ಲ. ದೀರ್ಘಕಾಲ ಕೊಳೆಯುವುದಿಲ್ಲ. ಹಾಗಾಗಿ ಜೈವಿಕ ಪರಿಸರಕ್ಕೆ ಹಾನಿಯಾಗದ ತ್ರಿವರ್ಣ ಧ್ವಜಗಳನ್ನು ಬಳಕೆ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸುವಂತೆ ಸಚಿವಾಲಯ ತಿಳಿಸಿದೆ.

  300x250 AD

  ಪ್ಲಾಸ್ಟಿಕ್ ವಿಲೇವಾರಿ ದೇಶದ ಬಹುದೊಡ್ಡ ಸವಾಲುಗಳಲ್ಲಿ ಒಂದು. ಆದ್ದರಿಂದ ಪ್ರಮುಖ ರಾಷ್ಟ್ರೀಯ, ಕ್ರೀಡಾ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಜೈವಿಕ ವಿಘಟನೆಗೆ ಪೂರಕವಾಗಿ ಕಾಗದದ ಧ್ವಜಗಳನ್ನು ಬಳಕೆ ಮಾಡುವಂತೆ ಭಾರತೀಯ ಧ್ವಜ ಸಂಹಿತೆ -2002 ಮತ್ತು ನಿಬಂಧನೆಗಳು ತಿಳಿಸುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡದಂತೆ ದೇಶವಾಸಿಗಳಿಗೆ ಕೇಂದ್ರ ಗೃಹಸಚಿವಾಲಯ ಮನವಿ ಮಾಡಿದೆ.

  Share This
  300x250 AD
  300x250 AD
  300x250 AD
  Back to top