ವಿದುಷಾಂ ವದನಾದ್ವಾಚಃ ಸಹಸಾ ಯಾಂತಿ ನೋ ಬಹಿ:
ಯಾತಾಶ್ಚೇನ್ನ ಪರಾಂಚಂತಿ ದ್ವಿರದಾನಾಂ ರದಾ ಇವ ||
ವಿದ್ವಾಂಸರು ಅಥವಾ ಪ್ರಾಜ್ಞರು ಅನ್ನಿಸಿಕೊಂಡವರ ಮುಖದಿಂದ ಯಾವುದೇ ವಿಚಾರವಾಗಿ ಮಾತುಗಳು ಧುತ್ತೆಂದು ಹೊರಬೀಳಲಾರವು. ಮಾತಿಗೆ ಮುನ್ನ ಹತ್ತಾರುಬಾರಿಗೆ ವಿಚಾರಮಾಡುವ ಜನ ಅವರು. ತಕ್ಷಣದ ಮೌಖಿಕ ಪ್ರತಿಕ್ರಿಯೆಯನ್ನು ಅವರಿಂದ ಪ್ರತೀಕ್ಷಿಸುವಂತಿಲ್ಲ. ಒಂದು ಹಂತದ ಬಳಿಕ ಅವರ ಮುಖದಿಂದ ಹೊರಬರುವ ಮಾತುಗಳಿರುತ್ತವಲ್ಲ, ಅವು ವಾಪಸ್ ಹೋಗುವುದೆನ್ನುವುದೇ ಇಲ್ಲ. ಆಡಿದ ಮಾತು ಅಚ್ಚು ಹೊಡೆದಂತೆ ಉಳಿದುಕೊಳ್ಳುತ್ತದೆ. ಆನೆಗಳ ದಂತ ಒಮ್ಮೆ ಮರವನ್ನೋ ಅಥವಾ ಇನ್ನೋನೋ ವಸ್ತುವನ್ನೋ ಪ್ರವೇಶಿಸಿದ ಮೇಲೆ ಸುಮ್ಮನೇ ಆ ವಸ್ತುವನ್ನು ಸೀಳದೇ ಹೊರಬಿದ್ದುದೇ ಇಲ್ಲ. ಹಾಗೇನೆ ತಿಳಿದವರ ಮಾತುಗಳೂ ಸಹ. ಶ್ರೀ ನವೀನ ಗಂಗೋತ್ರಿ
ಸುವಿಚಾರ
