ಶಿರಸಿ: ತನ್ನ ಪರಿಸರ ಕಾಳಜಿ ಕಾರ್ಯಗಳ ಮೂಲಕ ಜನಜನಿವಾಗಿರುವ ಶಿರಸಿಯ ಜೀವಜಲ ಕಾರ್ಯಪಡೆ ಪ್ರಸ್ತುತ ನೆರೆಪೀಡಿತರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜದಲ್ಲಿ ಮಾದರಿ ಕಾರ್ಯ ಮಾಡುತ್ತಿದೆ.
ಕಾರ್ಯಪಡೆಯ ವತಿಯಿಂದ ಇತ್ತೀಚಿಗೆ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಸಿದ್ಧಾಪುರ ತಾಲೂಕಿನ ಹೇರೂರು ಭಾಗಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿ ನೆರವಿನ ಹಸ್ತ ಚಾಚಲಾಯಿತು.
ನೆರೆಯಿಂದಾಗಿ ಸಂಭವಿಸಿದ ಅವಘಡದಲ್ಲಿ ಮನೆಯನ್ನು ಸಂಪೂರ್ಣವಾಗಿ ಕಳೆದು ಕೊಂಡು ಸದ್ಯ ತಾತ್ಕಾಲಿಕ ಮನೆಯೊಂದರಲ್ಲಿ ವಾಸಿಸುತ್ತಿರುವ ಬಾಳೂರಿನ ಗಣಪತಿ ಭಟ್ ರವರಿಗೆ ಧ್ಯೆರ್ಯ ಹೇಳಿ ಐವತ್ತು ಸಾವಿರ ರೂಪಾಯಿ ಚೆಕ್ ಅನ್ನು ನೀಡಲಾಯಿತು. ನೆರೆಯಲ್ಲಿ ಸಂಪೂರ್ಣವಾಗಿ ನೆಲಸಮವಾದ ಮನೆಯ ಜಾಗವನ್ನು ವೀಕ್ಷಿಸಿದ ಕಾರ್ಯಪಡೆಯ ಸದಸ್ಯರು ಅವರಿಗೆ ಮುಂದೆ ಅಗತ್ಯವಿರುವ ಜೆಸಿಬಿ, ಹಿಟಾಚಿ, ಟಿಪ್ಪರ ವಾಹನಗಳ ಸಹಾಯ ನೀಡುವುದಾಗಿ ತಿಳಿಸಿದರು.
ಕಿಬ್ಬಳ್ಳಿಯ ರಾಮಚಂದ್ರ ಹೆಗಡೆಯವರ ಮನೆಗೆ ಭೇಟಿ ನೀಡಿ ಮನೆಗೆ ಉಂಟಾದ ಹಾನಿಯನ್ನು ವೀಕ್ಷಿಸಿ ಅವರಿಗೆ ಹತ್ತು ಸಾವಿರದ ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಸದಸ್ಯರಾದ ವಿ. ಪಿ. ಹೆಗಡೆ ವೈಶಾಲಿ, ಎಂ. ಎಂ.ಭಟ್, ಅನಿಲ ನಾಯಕ ಹಾಗೂ ಶ್ರೀಕಾಂತ ಹೆಗಡೆ ಇದ್ದರು.