ಶಿರಸಿ: ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಯ (ಟಿಆರ್‌ಸಿ) ಸಭಾಭವನದಲ್ಲಿ ಅ.10 ರಂದು ಬೆಳಿಗ್ಗೆ 10 ಗಂಟೆಗೆ ’ಬೆಟ್ಟ ಭೂಮಿಯ ಮಹತ್ವ ಮತ್ತು ಉಪಯೋಗ’ ಹಾಗೂ ’ಮಳೆಗಾಲದಲ್ಲಿ ತೋಟದ ನಿರ್ವಹಣಾ ಕ್ರಮಗಳ’ ಕುರಿತು ಕೃಷಿ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಆರ್‌ಸಿ ಅಧ್ಯಕ್ಷರು, ಟಿಎಸ್‌ಎಸ್ ಕಾರ್ಯಾಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ವಹಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಟ್ಟ ಜಾಗೃತಿ ಅಭಿಯಾನದ ಸಂಚಾಲಕರಾದ ನರೇಂದ್ರ ಹೆಗಡೆ, ಹೊಂಡಗಾಶಿ ಹಾಗೂ ಟಿಎಸ್‌ಎಸ್ ಕೃಷಿ ಸಲಹೆಗಾರರಾದ ಶ್ರೀಕಾಂತ ಭಟ್ಟ, ಗೋರೇಬೈಲ್ ಪಾಲ್ಗೊಳ್ಳುವರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.