ಕುಮಟಾ: ತಾಲೂಕಿನ ಕತಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಉತ್ತಮ ತಳಿಯ ಗಿಡಗಳನ್ನು ನೆಡುವ ಮೂಲಕ ವನಮೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಗೆ ಉಪಯುಕ್ತ ಸಸ್ಯಗಳಾದ ತೆಂಗು, ಅಡಿಕೆ, ಬಾಳೆ, ಜಾಯಿಕಾಯಿ, ನುಗ್ಗೆ, ಕರಿಬೇವು ಮುಂತಾದ ಜಾತಿಯ ಸಸ್ಯಗಳನ್ನು ಶಾಲಾ ಕೈತೋಟದಲ್ಲಿ ನೆಡುವ ಮೂಲಕ ಎಲ್ಲರೂ ಸಂಭ್ರಮಿಸಿದರು.
ನಿಕಟಪೂರ್ವ ಎಸ್.ಡಿ ಎಂ.ಸಿ ಅಧ್ಯಕ್ಷ ಮಹೇಶ ದೇಶಭಂಡಾರಿ, ಸದಸ್ಯರಾದ ಕಮಲಾ ಅಂಬಿಗ, ಗೀತಾ, ಮಂಗಲಾ ಗೌಡ, ಪೆÇೀಷಕರಾದ ರಮೇಶ ರೇವಣಕರ, ಪ್ರಭಾರಿ ಮುಖ್ಯ ಶಿಕ್ಷಕಿ ಆಶಾ ಹೆಬ್ಬಾರ, ಸಹ ಶಿಕ್ಷಕಿಯರಾದ ಸುಮಂಗಲಾ ಶೆಟ್ಟಿ, ಕಲಾವತಿ ಭಟ್ಟ, ಸುವರ್ಣ ನಾಯಕ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಗೀತಾ ಗೌಡ, ಸುನಂದಾ ಮುಕ್ರಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.