ಜಿಲ್ಲೆಯಲ್ಲಿ ಆ.7 ಶನಿವಾರದಂದು 47 ಕರೋನಾ ಪಾಸಿಟಿವ್ ದಾಖಲಾಗಿದೆ. ಅವುಗಳಲ್ಲಿ ಕಾರವಾರ 7, ಅಂಕೋಲಾ 5, ಕುಮಟಾ 9, ಹೊನ್ನಾವರ 9, ಭಟ್ಕಳ 2, ಶಿರಸಿ 9, ಸಿದ್ದಾಪುರ 3, ಯಲ್ಲಾಪುರ 2 ಹಾಗೂ ಹಳಿಯಾಳದಲ್ಲಿ 1 ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿ ಶನಿವಾರ ಯಾವುದೇ ಸಾವು ದಾಖಲಾಗಿಲ್ಲ.
ಜಿಲ್ಲೆಯಲ್ಲಿ ಒಟ್ಟೂ 483 ಸಕ್ರಿಯ ಪ್ರಕರಣಗಳಿದ್ದು 69 ಮಂದಿ ಆಸ್ಪತ್ರೆಯಲ್ಲಿ ಹಾಗೂ 414 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಾದ್ಯಂತ ಇಂದು 62 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಕಾರವಾರ 10, ಅಂಕೋಲಾ 3, ಕುಮಟಾ 14, ಹೊನ್ನಾವರ್ 16, ಭಟ್ಕಳ 9,ಶಿರಸಿ 3, ಸಿದ್ದಾಪುರ 1, ಹಾಗೂ ಯಲ್ಲಾಪುರದಲ್ಲಿ 6 ಮಂದಿ ಕರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 53,598 ಮಂದಿಗೆ ಕರೋನಾ ಸೋಂಕು ತಗುಲಿದ್ದು ಅದರಲ್ಲಿ 52,379 ಮಂದಿ ಗುಣಮುಖರಾಗಿದ್ದಾರೆ ಮತ್ತು 736 ಮಂದಿ ಸಾವನ್ನಪ್ಪಿದ್ದಾರೆ.