ಕುಮಟಾ: ತಾಲೂಕಿನ ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯವಶ್ಯವಾಗಿದ್ದ ಇ.ಸಿ.ಜಿ ಮಷಿನ್‍ನ್ನು ಡಾ.ಪದ್ಮನಾಭ ಕಾಮತ ನೀಡಿದ್ದು, ಅದನ್ನು ಅಶೋಕ ಭಟ್ಟ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕೇಂದ್ರದ ವೈದ್ಯೆ ಡಾ.ಚೈತಪ್ರಭಾ ನಾಯಕ ಮಷಿನ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ, ಅಳಕೋಡ ಗ್ರಾಪಂ ಅಧ್ಯಕ್ಷೆ ಕೇಸರಿ ಜೈನ, ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ಮಹೇಶ ದೇಶಭಂಡಾರಿ, ವಿನಾಯಕ ನಾಯ್ಕ ಹೆಬೈಲ್, ಶ್ರೀಧರ ಗೌಡ, ನಯನಾ ಗೌಡ ಸೇರಿದಂತೆ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.