ಯಲ್ಲಾಪುರ: ಮೈಸೂರಿನಲ್ಲಿ ಏಪ್ರಿಲ್‍ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಹಾಗೂ ಚಂಡೀಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್‍ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಪ್ರಮಾಣಪತ್ರ ನೀಡುವ ಕಾರ್ಯಕ್ರಮ ಆ.8 ರ ಬೆಳಿಗ್ಗೆ 11 ಗಂಟೆಗೆ ನಗರದ ರೈತ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಇವರು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಜಾನೆ ಕಾರವಾರ, ಕೈಗಾ, ಶಿರಸಿ ಯಲ್ಲಾಪುರ ಹಾಗೂ ಮುಂಡಗೊಡ ತಂಡಗಳ ನಡುವೆ ಉತ್ತರ ಕನ್ನಡ ಪ್ರೀಮಿಯರ್ ಲೀಗ್ ರೋಲರ್ ಸ್ಕೇಟಿಂಗ್ ಹಾಕಿ ಪಂದ್ಯಾವಳಿ ನಡೆಯಲಿದ್ದು ಗೆದ್ದ ತಂಡಕ್ಕೆ ನಗದು ಹಾಗು ಪಾರಿತೋಷಕ ನಿಡಲಾಗುತ್ತದೆ.
ಯಲ್ಲಾಪುರ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ಸಿ ಪಿ ಆಯ್ ಸುರೇಶ ಯಳ್ಳುರ್, ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹಾಗು ಉದ್ಯಮಿಗಳಾದ ಬಾಲಕೃಷ್ಣ ನಾಯಕ, ಸಮಾಜಿಕ ಮುಖಂಡ ವಿಜಯ ಮಿರಾಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ತಂಡದ ತರಬೇತುದಾರ ದೀಲಿಪ್ ಹಣಬರ್ ತಿಳಿಸಿದ್ದಾರೆ.