Slide
Slide
Slide
previous arrow
next arrow

ಸಾರ್ವಜನಿಕರೇ ಎಚ್ಚರ; ಪಿಎಂ ‘ಕನ್ಯಾ ಯೋಜನೆ’ ಅಪ್ಪಟ ಸುಳ್ಳು ಸುದ್ದಿ !

300x250 AD

eUK ವಿಶೇಷ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಹೆಸರಿನಲ್ಲಿ ಪಿಎಂ ಕನ್ಯಾ ಯೋಜನೆ ಎಂಬ ಹೆಸರಿನ ಸುಳ್ಳು ಹರಿದಾಡುತ್ತಿದ್ದು, ಜನರು ಈ ಕುರಿತು ಅಂಚೆ ಕಛೇರಿಗಳಲ್ಲಿ ವಿಚಾರಿಸತೊಡಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಪ್ರಧಾನಮಂತ್ರಿ ಕನ್ಯಾ ಯೋಜನೆ’ ಎಂಬ ಸುಳ್ಳು ಸುದ್ದಿಯ ಪ್ರಕಾರ, ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೆ ಪ್ರತಿ ತಿಂಗಳು 2,000 ಖಾತೆಗೆ ಬರುವುದಾಗಿ, ಹೆಣ್ಣುಮಕ್ಕಳ ಪಾಲಕರು ಕೂಡಲೇ ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನೆ ಪಡೆಯಬೇಕು ಎಂಬಂತಹ ಸುದ್ದಿಗಳು , ಪೋಸ್ಟ್ ಗಳು ಹರಿದಾಡುತ್ತಿದೆ. ಇದು ಅಪ್ಪಟ ಸುಳ್ಳಾಗಿದ್ದು ಆ ಹೆಸರಿನ ಯಾವುದೇ ಯೋಜನೆ ಸರ್ಕಾರದಿಂದ ಜಾರಿಯಾಗಿಲ್ಲ ಎಂಬುದು ಈಗ ಸಾಬೀತಾಗಿದೆ.

300x250 AD

ಈ ಕುರಿತು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಫ಼್ಯಾಕ್ಟ್ ಚೆಕ್ ನಡೆಸಿದ್ದು ಈ ಸುದ್ದಿ ಸುಳ್ಳು ಎಂದು ಸಾಬೀತು ಪಡಿಸಿದೆ. ಜನರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಟ್ಟು ಮೋಸ ಹೋಗಬಾರದ್ದು, ಈ ಕುರಿತು ಎಚ್ಚರದಿಂದ ಇರಬೇಕು ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top