• Slide
    Slide
    Slide
    previous arrow
    next arrow
  • ಒಲಂಪಿಕ್ಸ್ ನಲ್ಲಿ‌ ನಾಲ್ಕನೇ ಸ್ಥಾನ ಪಡೆದ ಕನ್ನಡದ ಕುವರಿ; ಮೋದಿ ಶ್ಲಾಘನೆ

    300x250 AD

    ಟೋಕಿಯೋ: ಟೊಕಿಯೋ‌ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನ ಗಾಲ್ಫ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕರ್ನಾಟಕದ ಕ್ರೀಡಾಪಟು ಅದಿತಿ ಅಶೋಕ್ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

    ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಗಾಲ್ಫ್ ಕ್ರೀಡೆಯಲ್ಲಿ‌ ಸ್ಪರ್ಧಿಸಲಾಗಿದ್ದು, ಕನ್ನಡದ ಕುವರಿ ಅದಿತಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ‌ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಉತ್ತಮ ಪ್ರದರ್ಶನ ನೀಡಿದ್ದೀರಿ. ಸ್ಪರ್ಧೆಯಲ್ಲಿ ಅದ್ಭುತ ಕೌಶಲ್ಯ, ಸಂಕಲ್ಪ‌ವನ್ನು ತೋರಿಸಿದ್ದೀರಿ. ಪದಕ ಸ್ವಲ್ಪ ಅಂತರದಲ್ಲಿ ಕೈತಪ್ಪಿದೆ. ಆದರೆ ನೀವು ಉತ್ತಮ ಸಾಧನೆ ಮೆರೆದಿದ್ದೀರಿ. ಒಂದು ಹೊಸ ದಾರಿಯನ್ನು ಬೆಳಗಿದ್ದೀರಿ. ನಿಮ್ಮ ಮುಂದಿನ ಪ್ರಯತ್ನ‌ಗಳಿಗೆ ಶುಭ ಹಾರೈಕೆಗಳು’ ಎಂದು ತಿಳಿಸಿದ್ದಾರೆ.

    300x250 AD

    ಕೃಪೆ: ನ್ಯೂಸ್13

    Share This
    300x250 AD
    300x250 AD
    300x250 AD
    Leaderboard Ad
    Back to top