Slide
Slide
Slide
previous arrow
next arrow

ಭಾರತದ ಹೊಸ ಐಟಿ ನಿಯಮಕ್ಕನುಗುಣ ಅಧಿಕಾರಿಗಳ ನೇಮಕ; ಟ್ವಿಟ್ಟರ್ ಮಾಹಿತಿ

300x250 AD

ನವದೆಹಲಿ: ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳಿಗೆ ಅನುಗುಣವಾಗಿ ಖಾಯಂ ಆಧಾರದಲ್ಲಿ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ, ನೋಡಲ್ ಸಂಪರ್ಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದಾಗಿ ಟ್ವಿಟ್ಟರ್ ನವದೆಹಲಿ ಹೈಕೋರ್ಟ್‍ಗೆ ತಿಳಿಸಿದೆ.

ಭಾರತ ಸರ್ಕಾರದ ನೂತನ ಐಟಿ ನಿಯಮಗಳಿಗೆ ಅನುಸಾರವಾಗಿ ಕಳೆದ ಆಗಸ್ಟ್ 4 ರಂದೇ ಈ ಮೂರೂ ಸ್ಥಾನಗಳಿಗೆ ನೇಮಕಾತಿ ಮಾಡಲಾಗಿದೆ. ಹಾಗೆಯೇ ಈ ಹಿಂದಿನ ಕೋರ್ಟ್ ಆದೇಶದನ್ವಯ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದೆ.

300x250 AD

ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಐಟಿ ನಿಯಮಗಳನ್ನು ಈ ಹಿಂದೆ ಟ್ವಿಟ್ಟರ್ ಕಡೆಗಣಿಸಿತ್ತು. ಈ ವಿಚಾರದಲ್ಲಿ ಭಾರತದ ನೆಲದಲ್ಲಿ ಭಾರತೀಯ ಕಾನೂನುಗಳನ್ನು ಅವಗಣನೆ ಮಾಡುವ ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿತ್ತು. ಕೊನೆಗೂ ಟ್ವಿಟ್ಟರ್ ಭಾರತದ ಐಟಿ ಕಾನೂನುಗಳಿಗೆ ಬದ್ಧವಾಗಿ ನಡೆದುಕೊಳ್ಳುವ ಮೂಲಕ, ಇದೀಗ ಮೂರು ಸ್ಥಾನಗಳಿಗೂ ನೇಮಕಾತಿ ಸಂಪೂರ್ಣಗೊಳಿಸಿದೆ.
ನ್ಯೂಸ್ 13

Share This
300x250 AD
300x250 AD
300x250 AD
Back to top