Slide
Slide
Slide
previous arrow
next arrow

ದೋಸೆಗೆ ಬಲು ರುಚಿ ಶೇಂಗಾ ಚಟ್ನಿ ಮಾಡಿ ಸವಿಯಿರಿ

300x250 AD

ಅಡುಗೆ ಮನೆ: ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 1 ಕಪ್ ಶೇಂಗಾ ಬೀಜ ಹಾಕಿ ಅದು ಕೆಂಪಗಾಗುವವರೆಗೆ ಹುರಿದುಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.
ಶೇಂಗಾದ ಮೇಲೆ ಇರುವ ಸಿಪ್ಪೆ ತೆಗೆಯಿರಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ, ಅದಕ್ಕೆ 3 ಬೆಳ್ಳುಳ್ಳಿ ಎಸಳು ಸೇರಿಸಿ ಹಾಗೆ 1 ಈರುಳ್ಳಿ, 2 ಒಣಮೆಣಸು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿ ಸ್ವಲ್ಪ ಮೆತ್ತಗಾದರೆ ಸಾಕು ಕೆಂಪಗಾಗುವ ಅಗತ್ಯವಿಲ್ಲ.

300x250 AD


ನಂತರ ಅರ್ಧ ಲಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು, ಸಣ್ಣ ತುಂಡು ಬೆಲ್ಲ ಸೇರಿಸಿ ಹುರಿದುಕೊಳ್ಳಿ, ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಟ್ಟು ಇಡ್ಲಿ ಅಥವಾ ದೋಸೆಯೊಂದಿಗೆ ಸವಿಯಿರಿ.

Share This
300x250 AD
300x250 AD
300x250 AD
Back to top