ಬೆಂಗಳೂರು: ಇತ್ತೀಚಿಗೆ ಜನಜನಿತವಾಗಿರುವ ‘ಕ್ಲಬ್ ಹೌಸ್’ ಜಾಲತಾಣದಲ್ಲಿ ವಿಭಿನ್ನ, ವಿನೂತನ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದು ಯಕ್ಷಗಾನ, ತಾಳ ಮದ್ದಲೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ‘ಕ್ಲಬ್‌ಹೌಸ್’ ಆಧುನಿಕ ವೇದಿಕೆಯಾಗುತ್ತಿದೆ.
ಆ.8 ರಂದು ಸಂಜೆ 7.30 ಕ್ಕೆ ಇಂತಹುದೇ ಕಾರ್ಯಕ್ರಮವಾದ ವಿಭೀಷಣ ನೀತಿಯ ಕುರಿತಾದ ಕಲಾರಾಮ ತಾಳ ಮದ್ದಲೆ ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರ ಮಠ ಕ್ಲಬ್ ಹೌಸನ ಕಲಾರಾಮದಲ್ಲಿ ಆಯೋಜಿಸಲಾಗಿದೆ.
ರಾವಣನ ಸಹೋದರನಾಗಿದ್ದರೂ ರಾಮ ಭಕ್ತನಾದ ವಿಭೀಷಣನ ನೀತಿ ಕುರಿತು ವಿಶ್ಲೇಷಿಸುವ ಅಪರೂಪದ ತಾಳಮದ್ದಲೆ ವಿಭೀಷಣ ನೀತಿ ಆ.8 ರ ಸಂಜೆ 7.30 ಕ್ಕೆ ನೇರ ಪ್ರಸಾರ ಆಗಲಿದೆ.
ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಸಹಕಾರ ನೀಡಲಿದ್ದಾರೆ.
ವಿಭೀಷಣನಾಗಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ರಾವಣನಾಗಿ ಡಾ.ಜಿ.ಎಲ್.ಹೆಗಡೆ ಕುಮಟಾ, ರಾಮನಾಗಿ ಪ್ರಮೋದ ಹೆಗಡೆ, ಹನುಮಂತನಾಗಿ ತುಳಸಿ ಹೆಗಡೆ ಪಾಲ್ಗೊಳ್ಳಿದ್ದಾರೆ ಎಂದು ಸಂಯೋಜಕ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ತಿಳಿಸಿದ್ದಾರೆ.