ಶಿರಸಿ: ನಗರದ ಗಾಂಧಿನಗರ, ಭೀಮನ ಗುಡ್ಡ, ಅಗಸೆಬಾಗಿಲು, ಅಂಬಾಗಿರಿ ಭಾಗದ ಬಡ ಕುಟುಂಬಗಳಿಗೆ ಯೂತ್ ಫಾರ್ ಸೇವಾ ಘಟಕದಿಂದ ತೊಗರಿ ಬೇಳೆಯನ್ನು ವಿತರಿಸಿದರು.
ಪ್ರತಿ ತಿಂಗಳು ಮುಷ್ಟಿ ಅಕ್ಕಿ ಅಂತೆ ಸಂಗ್ರಹಿಸುವ ಬಡ ಕುಟುಂಬಗಳನ್ನು ಗುರುತಿಸಿ ನೀಡುವ ಕಾರ್ಯವಿದು. ಶಿರಸಿ ನಗರದ ಯೂತ್ ಫಾರ್ ಸೇವಾ ಕಾರ್ಯಕರ್ತರಾದ ಸ್ವಾತಿ ನಾಯಕ್, ಆದರ್ಶ, ಸುಷ್ಮಾ ಬೀಳಗಿ ಮತ್ತು ಪ್ರೀತಿ ನಾಯಕ್ ಹಾಗೂ ಯೂತ್ ಫಾರ್ ಸೇವಾದ ಸಂಯೋಜಕ ಉಮಾಪತಿ ಭಟ್ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.