ಶಿರಸಿ: ತಾಲೂಕಿನಲ್ಲಿ ಆ.7 ಶನಿವಾರದಂದು 1,450 ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 1,000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.
1,450 ಡೋಸ್ ಕೋವಿಶೀಲ್ಡ್ ಗಳಲ್ಲಿ ಹೆಗಡೆಕಟ್ಟಾದಲ್ಲಿ 200 ಡೋಸ್, ದಾಸನಕೊಪ್ಪ 200 ಡೋಸ್, ರೇವಣಕಟ್ಟಾ 100 ಡೋಸ್, ಕಕ್ಕಳ್ಳಿ 200 ಡೋಸ್, ಮೆಣಸಿ 50 ಡೋಸ್, ಬನವಾಸಿ 200 ಡೋಸ್, ಸುಗಾವಿ 150 ಡೋಸ್, ಹುಲೇಕಲ್ 100 ಡೋಸ್, ಸಾಲ್ಕಣಿ 200 ಡೋಸ್, ಬಿಸಲಕೊಪ್ಪದಲ್ಲಿ 50 ಡೋಸ್ ಲಸಿಕೆ ಲಭ್ಯವಿದೆ. ಈ ಮೇಲಿನ ಎಲ್ಲ ಲಸಿಕೆಯನ್ನು ಆದ್ಯತೆಯ ಮೇರೆಗೆ ಸೆಕೆಂಡ್ ಡೋಸ್ ಪಡೆಯುವವರಿಗೆ ಮಾತ್ರ ದೊರೆಯಲಿದೆ.
1,000 ಕೋವ್ಯಾಕ್ಸಿನ್ ಲಸಿಕೆಯಲ್ಲಿ ಉಂಚಳ್ಳಿಯಲ್ಲಿ 100 (ಸೆಕೆಂಡ್) ಡೋಸ್, ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 900 (ಸೆಕೆಂಡ್) ಡೋಸ್ ( ವಿದ್ಯಾರ್ಥಿಗಳಿಗಾಗಿ ಮಾತ್ರ) ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.