ಶಿರಸಿ: ತಾಲೂಕಿನಲ್ಲಿ ಆ.6 ಶುಕ್ರವಾರದಂದು 13 ಕರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.
ಅವುಗಳಲ್ಲಿ ಶಾಂತಿನಗರದಲ್ಲಿ 1, ಅಯ್ಯಪ್ಪನಗರ 2, ಸಿ.ಪಿ.ಬಝಾರ್ 1, ಐದುರಸ್ತೆ ಸರ್ಕಲ್ 1, ರಾಜೀವ ನಗರ 1, ಟಿ.ಎಸ್.ಎಸ್ ರಸ್ತೆ 2, ಹುಡೇಲ್ ಕೊಪ್ಪ 1, ಆದರ್ಶನಗರ 1, ಕೆ ಎಚ್ ಬಿ ಕಾಲನಿ 1,ಹುಲೇಕಲ್ 1, ಶಿವಾಜಿ ಚೌಕದಲ್ಲಿ1 ಕೇಸ್ ದಾಖಲಾಗಿದೆ.
ಸ್ಕ್ಯಾನ್‌ಸೆಂಟರ್ ನಲ್ಲಿ 1 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟೂ 49 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.
ಇನ್ನು ತಾಲೂಕಾಸ್ಪತ್ರೆಯಿಂದ ಒಟ್ಟೂ 6 ಜನ ಕರೋನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ತಾಲೂಕಿನಲ್ಲಿ 98 Rapid ಹಾಗೂ 845 RTPCR ಸೇರಿದಂತೆ ಒಟ್ಟೂ 943 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
ಇಲ್ಲಿಯವರೆಗೆ ತಾಲೂಕಿನಲ್ಲಿ ಒಟ್ಟೂ 7,008 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 6887 ಮಂದಿ ಗುಣಮುಖರಾಗಿದ್ದಾರೆ. ರಿಕವರಿ ರೇಟ್ ಶೇ.98 ರಷ್ಟಿದೆ.