ಯಲ್ಲಾಪುರ: ತಾಲೂಕಿನಲ್ಲಿ ಒಟ್ಟೂ 800 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು ಅವುಗಳಲ್ಲಿ ತಾಲೂಕಾಸ್ಪತ್ರೆಯಲ್ಲಿ 200 ಡೋಸ್ ಲಸಿಕೆ ನೀಡಲಾಗುವುದು.
ತಾಲೂಕಿನ ಚವತ್ತಿ ಆರೋಗ್ಯಕೇಂದ್ರದಲ್ಲಿ 100 ಡೋಸ್, ಮಂಚಿಕೇರಿ ಆರೋಗ್ಯ ಕೇಂದ್ರದಲ್ಲಿ 100ಡೋಸ್, ಕುಂದರಗಿ ಆರೋಗ್ಯ ಕೇಂದ್ರದಲ್ಲಿ 100 ಡೋಸ್, ಕಿರವತ್ತಿ ಆರೋಗ್ಯ ಕೇಂದ್ರದಲ್ಲಿ 100 ಡೋಸ್, ದೇಹಳ್ಳಿ ಆರೋಗ್ಯ ಕೇಂದ್ರದಲ್ಲಿ100 ಡೋಸ್ ಹಾಗೂ ನಂದೊಳ್ಳಿ ಆರೋಗ್ಯ ಕೇಂದ್ರದಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ.
ಇನ್ನು ತಾಲೂಕಿನಲ್ಲಿ ಶುಕ್ರವಾರ 6 ಜನರಿಗೆ (ಜಿಲ್ಲಾ ಹೆಲ್ತ್ ಬುಲೆಟಿನ್ ಪ್ರಕಾರ8) ಕರೋನಾ ಪಾಸಿಟಿವ್ ದೃಢವಾಗಿದೆ. ಒಟ್ಟೂ 216 ಕೊವಿಡ್ ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ ತಾಲೂಕಾಸ್ಪತ್ರೆಯಲ್ಲಿ 38, ಮಂಚಿಕೇರಿಯಲ್ಲಿ 33, ಚವತ್ತಿಯಲ್ಲಿ 14, ಕಿರವತ್ತಿಯಲ್ಲಿ 17, ವಜ್ರಳ್ಳಿಯಲ್ಲಿ 51, ನಂದೊಳ್ಳಿಯಲ್ಲಿ 25, ಕುಂದರಗಿಯಲ್ಲಿ 23, ಕಳಚೆಯಲ್ಲಿ 7 ಸೇರಿದಂತೆ ಒಟ್ಟೂ 98 ರ್ಯಾಪಿಡ್ ಹಾಗೂ 118 RTPCR ಸೇರಿದಂತೆ ಒಟ್ಟೂ 216 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ.