ಸಿದ್ದಾಪುರ: ತಾಲೂಕಿನಲ್ಲಿ ಆ.7 ಶನಿವಾರದಂದು ವಿವಿಧೆಡೆ ಕೋವಿಶೀಲ್ಡ್ ಲಸಿಕಾ ಶಿಬಿರ ನಡೆಯಲಿದೆ.
ಪ್ರಾಥಮಿಕ ಆರೋಗ್ಯಕೇಂದ್ರ ಕೋಲಸಿರ್ಸಿ ವತಿಯಿಂದ ನಿಡಗೋಡು ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ನಡೆಯಲಿದ್ದು ಕೋವಿಶೀಲ್ಡ್ 150 ಡೋಸ್ ಲಸಿಕೆ ಲಭ್ಯವಿದೆ. ಹಾಗೂ ಬಿದ್ರಕಾನ್ ಗ್ರಾ.ಪಂ. ಸಭಾಭವನದಲ್ಲಿ ಕೋವಿಶೀಲ್ಡ್ 100 ಡೋಸ್, ಹಾಗೂ ಕಾನಗೋಡು ಗ್ರಾ.ಪಂ ಸಭಾಭವನದಲ್ಲಿ ಕೋವಿಶೀಲ್ಡ್ 150 ಡೋಸ್ ಲಸಿಕೆ ಲಭ್ಯವಿದ್ದು ಎರಡನೇ ಡೋಸ್ ಪಡೆಯುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆದ್ಯತೆ ನೀಡಲಾಗುವುದು.
ಹಾಗೂ ಸಿದ್ದಾಪುರದ ಪಟ್ಟಣದ ವಾರ್ಡ್ ನಂ 1, 2, 3 ರಲ್ಲಿನ ನಿವಾಸಿಗಳಿಗೆ ಲಸಿಕಾಶಿಬಿರ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು ಕೋವಿಶೀಲ್ಡ್ 200 ಡೋಸ್ ಲಸಿಕೆ ಲಭ್ಯವಿರುತ್ತದೆ. ಎರಡನೇ ಡೋಸ್ ಪಡೆಯುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆದ್ಯತೆ ನೀಡಲಾಗುವುದು.
ಪ್ರಾಥಮಿಕ ಆರೋಗ್ಯ ಕೇಂದ್ರ ಕೂರ್ಲಕೈ ವತಿಯಿಂದ ಮಾವಿನಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಶಿಬಿರ ನಡೆಯಲಿದ್ದು ಕೋವಿಶೀಲ್ಡ್ 100 ಡೋಸ್ ಲಸಿಕೆ ಲಭ್ಯವಿದೆಎರಡನೇ ಡೋಸ್ ಪಡೆಯುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆದ್ಯತೆ ನೀಡಲಾಗುವುದು.
ಪ್ರಾಥಮಿಕ ಆರೋಗ್ಯ ಕೇಂದ್ರ ಹೇರೂರಿನ ವತಿಯಿಂದ ಹೇರೂರು ಗ್ರಾ.ಪಂ ಸಭಾಭವನದಲ್ಲಿ ಲಸಿಕಾಶಿಬಿರ ನಡೆಯಲಿದ್ದು ಕೋವಿಶೀಲ್ಡ್ 100 ಡೋಸ್ ಲಸಿಕೆ ಲಭ್ಯವಿರುತ್ತದೆ. ಎರಡನೇ ಡೋಸ್ ಪಡೆಯುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆದ್ಯತೆ ನೀಡಲಾಗುವುದು ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.