ಅಂಕೋಲಾ: ರಾಷ್ಟೀಯ ಹೆದ್ದಾರಿ 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗ ಮಧ್ಯೆ ಶುಕ್ರವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಗದಗದಿಂದ ಯಲ್ಲಾಪುರ-ಅಂಕೋಲ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಕಾರಿಗೆ ತಾಲೂಕಿನ ಹೆಬ್ಬುಳ ಬಳಿ ಎದುರಿನಿಂದ ಅತಿವೇಗವಾಗಿ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗದಗ (ಪಂಚಾಕ್ಷರಿ ನಗರ )ನಿವಾಸಿ ವಸಂತ್ ಅಕ್ಕಿ (78) ಮೃತಪಟ್ಟು ಉಳಿದ ಮೂವರಿಗೆ ಗಾಯಗಳಾಗಿದೆ. ಬೇರೆ ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಲಾರಿ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.