ಭಟ್ಕಳ: ಭಯೋತ್ಪಾದನೆಯ ವಿರುದ್ಧ ರಾಷ್ಟ್ರೀಯ ತನಿಕಾ ದಳ ಹಾಗು ಪೋಲಿಸ್ ಇಲಾಖೆ ಶುಕ್ರವಾರ ಭಟ್ಕಳದಲ್ಲಿ ಕೈಗೊಂಡ ಕಾರ್ಯಾಚರಣೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಭಟ್ಕಳ-ಹೊನ್ನಾವರ ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.
ನನ್ನ ಭಟ್ಕಳ ತಾಲೂಕು ಭಯೋತ್ಪಾದನೆಯ ನೆಲೆಯಾಗಬಾರದು. ಅಂತಹ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವವರನ್ನು ಹೆಡೆಮುರಿಕಟ್ಟಲು ನಮ್ಮ ಸರ್ಕಾರ ಸದಾ ಸಿದ್ದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.