ಶಿರಸಿ: ಅರಣ್ಯ ಭೂಮಿಯಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಗಳಡಿ ರಾಜ್ಯ ಸರಕಾರ ಸಹಾಯಧನ ನೀಡಲು ಪರಿಗಣಿಸಲು ಆದೇಶಿಸಿದ ಆದೇಶ ಸ್ವಾಗತಾರ್ಹ. ಆದರೆ, ಇಂತಹ ಆದೇಶ ನೀಡಲು ರಾಜ್ಯ ಸರಕಾರಕ್ಕೆ ಇರುವ ಕಾನೂನಾತ್ಮಕ ಬದ್ದತೆಯ ಮೌಲ್ಯತೆಯನ್ನು ರಾಜ್ಯ ಸರಕಾರ ಸ್ಪಷ್ಟ ಪಡಿಸಬೇಕೆಂದು ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ.
ಅವರು ಇಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ವಸತಿ ಮತ್ತು ಅರಣ್ಯ ಇಲಾಖೆಯ ಇತ್ತೀಚಿನ ಆದೇಶವನ್ನು ಪ್ರದರ್ಶಿಸುತ್ತಾ ಹೇಳಿದರು.
ವಸತಿ ಇಲಾಖೆಯು ವಸತಿ ಯೋಜನೆಗಳಡಿ ಪೂರಕ ಆದೇಶ ನಿಡಿದರೇ, ಅರಣ್ಯ ಅಧಿಕಾರಿಗಳು ಪಂಚಾಯತ ಅಭೀವೃದ್ದಿ ಅಧಿಕಾರಿಗಳಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇಲ್ಲಿಯವರೆಗೂ ಯಾವುದಾದರು ಆಶ್ರಯ ಮನೆ ಮಂಜೂರಿ ಮಾಡಿದ್ದರೆ, ಅಂತಹ ಆಶ್ರಯ ಮನೆ ರದ್ದು ಪಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಇನ್ನು ಮುಂದೆ ಕಾಯ್ದಿಟ್ಟ ಅರಣ್ಯ ಪ್ರದೇಶ, ರಕ್ಷಿತ ಅರಣ್ಯ ಪ್ರದೇಶದಲ್ಲಿ ಆಶ್ರಯ ಮನೆ ಹಾಗೂ ಇನ್ನೀತರ ಯಾವುದೇ ಯೋಜನೆಗಳನ್ನು ಮಂಜೂರಿ ಮಾಡಬಾರದು ಹಾಗೂ ತಪ್ಪಿದ್ದಲ್ಲಿ ತಮ್ಮ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಅಡಿಯಲ್ಲಿ ಹಾಗೂ ಇನ್ನೀತರ ಅರಣ್ಯ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನಿರ್ಧೇಶನ ನೀಡುವುದರಿಂದ ವಸತಿ ಇಲಾಖೆ ಹೊರಡಿಸಿದ ಆದೇಶದ ಕುರಿತು ಸರಕಾರ ಕಾನೂನು ಬದ್ಧತೆಯನ್ನು ಪ್ರಕಟಿಸಲು ಅವರು ಒತ್ತಾಯಿಸಿದ್ದಾರೆ.
ಭೂಮಿ ಹಕ್ಕು ನೀಡದೇ, ಅರಣ್ಯ ಭೂಮಿ ಅರಣ್ಯೇತರ ಚಟುವಟಿಕೆಗೆ ನೀಡಲು ಇರುವ ಕಾನೂನಿನ ತೊಡಕನ್ನು ನಿವಾರಿಸದೇ, ಕೇಂದ್ರ ಸರಕಾರದ ಪರವಾನಿಗೆ ಪಡೆಯದೇ ವಸತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯ ಆದೇಶವು ಸುಫ್ರೀಂ ಕೋರ್ಟಿನ ನಿರ್ಧೇಶನಕ್ಕೆ ವ್ಯತಿರಿಕ್ತವಾಗುವುದೆಂಬ ಸಂಶಯ ಅವರು ವ್ಯಕ್ತಪಡಿಸಿದರು.
ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಸಾಗುವಳಿ ಮತ್ತು ವಾಸ್ತವ್ಯದ ಹಕ್ಕಿನ ಮೂಲಕ ಶಾಶ್ವತ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಚಿಂತಿಸಬೇಕು. ಅರಣ್ಯವಾಸಿಗಳ ಹಕ್ಕಿನ ಕುರಿತು ಸುಫ್ರಿಂ ಕೋರ್ಟನಲ್ಲಿ ಇಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ಅರಣ್ಯವಾಸಿಗಳಿಗೆ ತಾತ್ಪೂರ್ತಿಕ ಪರಿಹಾರದಿಂದ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಯಲಾರದೆಂದು ಅವರು ಹೇಳಿದರು.
ವಸತಿ ಇಲಾಖೆ ಹೇಳಿಕೆಗೆ ಅರಣ್ಯ ಅಧಿಕಾರಿಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ನೀಡುತ್ತಿರುವ ನೋಟಿಸ್ ಸರಕಾರ ಅರಣ್ಯವಾಸಿಗಳ ಪರವಾದ ನಿಲುವು ಗೊಂದಲಮಯವಾಗಿದೆ. ಸರಕಾರ ಈ ದಿಶೆಯಲ್ಲಿ ಸ್ಪಷ್ಟತೆ ನಿಲುವನ್ನು ಪ್ರಕಟಿಸಿ ತಾತ್ಪೂರ್ತಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರದ ಕಡೆಗೆ ಚಿಂತಿಸುವುದು ಅವಶ್ಯ ಎಂದು ರವೀಂದ್ರ ನಾಯ್ಕ ಹೆಳಿದರು.
ಒಕ್ಕಲೆಬ್ಬಿಸುತ್ತೇವೆ ಎಂಬ ಪ್ರಮಣ ಪತ್ರ:
ಸರ್ವೋಚ್ಛ ನ್ಯಾಯಾಲಯದಲ್ಲಿ ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರ ಆಗಿರುವ ಅರಣ್ಯವಾಸಿಗಳನ್ನು ಹಂತಹಂತವಾಗಿ ಒಕ್ಕಲೆಬ್ಬಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದು ಇಂತಹ ಸಂದರ್ಭದಲ್ಲಿ ಸರಕಾರವು ಅನಧೀಕೃತ ಅರಣ್ಯವಾಸಿಗಳಿಗೆ ಯೋಜನೆಯಡಿ ಸೌಕರ್ಯ ಒಗದಿಸುವುದು ನಿಷ್ಪ್ರಯೋಜನೆ ಆಗುವುದೆಂದು ರವೀಂದ್ರ ನಾಯ್ಕ ತಿಳಿಸಿದರು.
ಲಿಂಗನಮಕ್ಕಿ ನಿರಾಶ್ರಿತರ ಸಮಸ್ಯೆ:
ಲಿಂಗನಮಕ್ಕಿ ವಿದ್ಯುತ್‍ಗಾಗಿ ನಿರಾಶ್ರಿತರಿಗೆ 1960 ರಲ್ಲಿ ನೀಡಿದ ಭೂಮಿಯನ್ನ 2017 ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಕ್ಕು ಪತ್ರ ನೀಡಿದ್ದನ್ನು ಕರ್ನಾಟಕ ಉಚ್ಛ ನ್ಯಾಯಾಲಯವು ಪ್ರಸಕ್ತ ಮಾರ್ಚ ತಿಂಗಳಿನಲ್ಲಿ ಕೇಂದ್ರ ಸರಕಾರದ ಪರವಾನಿಗೆ ಇಲ್ಲದೇ ನೀಡಿರುವ ಆದೇಶ ಹಕ್ಕು ಪತ್ರ ಕಾನೂನು ಬಾಹಿರ ಎಂದು ಉಲ್ಲೇಖಿಸಿರುವುದರಿಂದ ವಸತಿ ಇಲಖೆ ನೀಡಿದ ಆದೇಶವು ಕಾನೂನು ಬದ್ಧತೆ ಕುರಿತು ರಾಜ್ಯ ಸರಕಾರ ಪ್ರಕಟಿಸಬೇಕೆಂದು ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.