ಕಾರವಾರ: ಕೊವಿಡ್ ಮುಂಜಾಗ್ರತಾ ಕ್ರಮವಾಗಿ ಟಫ಼್ ರೂಲ್ಸ್ ಜಾರಿ ಮಾಡಲಾಗಿದ್ದು ನಿಶ್ಚಿತಾರ್ಥಕ್ಕೆಂದು ಆಗಮಿಸುತ್ತಿದ್ದ ಗೋವಾ ಮೂಲದ ಕುಟುಂಬ ಗಡಿಯಲ್ಲೇ ವಾಪಸ್ಸಾದ ಘಟನೆ ನಡೆದಿದೆ.
ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ RTPCR ಪ್ರಮಾಣಪತ್ರ ಇಲ್ಲದ ಕಾರಣ ಕಾರವಾರಕ್ಕೆ ಆಗಮಿಸುತ್ತಿದ್ದ ‘ವರ’ ಹಾಗೂ ಆತನ ಕುಟುಂಬದವರನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ.
ಕಾರವಾರ ಮೂಲದ ಯುವತಿಗೆ ಗೋವಾದ ಯುವಕನೊಂದಿಗೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ರಾಜ್ಯಕ್ಕೆ ಆಗಮಿಸಲು ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವುದರಿಂದ ನಿಶ್ಚಿತಾರ್ಥಕ್ಕೆ ಆಗಮಿಸಿದ ಮಂದಿ ಖಾಲಿಕೈಯಲ್ಲಿ ಹಿಂದಿರುಗಬೇಕಾಯಿತು.