ಶಿರಸಿ: ಇಲ್ಲಿಯ ಯಕ್ಷ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷರಾಗಿ ಹಿರಿಯರು, ಯಕ್ಷಗಾನ, ತಾಳಮದ್ದಲೆ ಅಭಿಮಾನಿಗಳು, ಪೋಷಕರು, ಕೃಷಿ ತಜ್ಞರು ಆಗಿರುವ ಕೇಶವ ಮಹಾಬಲೇಶ್ವರ ಹೆಗಡೆ, ಗಡಿಕೈ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ. ಹೆಗಡೆ (ಶಿರಸಿ) ಇವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇವರನ್ನು ನೇಮಿಸಲಾಗಿದೆ. ಈ ವರ್ಷದ ಪ್ರಥಮ ಕಾರ್ಯಕ್ರಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು)ಯ ಸಹಯೋಗದೊಂದಿಗೆ ಆ.7 ರಂದು ಸಂಜೆ 4ರಿಂದ ’ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ ಗಣಪತಿ ಭಟ್, ಅನಂತ ಹೆಗಡೆ ದಂತಳಿಗೆ, ಮೃದಂಗ ವಾದಕರಾಗಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ಪ್ರಸನ್ನ ಭಟ್ ಹೆಗ್ಗಾರ ಹಾಗೂ ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ಹರೀಶ ಬೊಳಂತಿಮೊಗರು ಭಾಗವಹಿಸಲಿದ್ದಾರೆ. ತಾಳಮದ್ದಲೆಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾಗಿದೆ. ಮಾಹಿತಿಗಾಗಿ 9538616882 ನ್ನು ಸಂಪರ್ಕಿಸಬಹುದೆಂದು ಟ್ರಸ್ಟ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.