• Slide
  Slide
  Slide
  previous arrow
  next arrow
 • ಸಾಮಾಜಿಕ ಮಾಧ್ಯಮಕ್ಕಿಲ್ಲ ನಿರ್ಬಂಧ; ಕೇಂದ್ರ ಸರ್ಕಾರ

  300x250 AD

  ನವದೆಹಲಿ: ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಜೊತೆಗೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕ ಸಾಧಿಸುತ್ತಿದ್ದು, ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯಮ ಫ್ಲ್ಯಾಟ್‍ಫಾರ್ಮ್‍ಗಳನ್ನು ನಿರ್ಬಂಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

  ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲು ಯಾವುದೇ ಸಾಮಾಜಿಕ ಮಾಧ್ಯಮಗಳಿಂದ ಅಸಾಧ್ಯ. ಬಳಕೆದಾರರು ದೇಶದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಹುವ ನಿಟ್ಟಿನಲ್ಲಿ ಸಮಾಜಿಕ ಮಾಧ್ಯಮಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಈ ಸಂಬಂಧ ಸರ್ಕಾರ ಸಹ ಹಲವು ದೂರುಗಳನ್ನು ಸ್ವೀಕರಿಸಿದೆ. ಇದಕ್ಕೆ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಿದೆ. ಆದರೆ ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

  300x250 AD

  ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ದ ಸೆಕ್ಷನ್ 69ಎ ಅಡಿಯಲ್ಲಿ ದೇಶದ ರಕ್ಷಣೆ, ಭದ್ರತೆ, ಏಕತೆ, ಸಾರ್ವಭೌಮತ್ವ, ವಿದೇಶಗಳ ಜೊತೆಗೆ ಉತ್ತಮ ಸಂಬಂಧ, ಕಾನೂನು ಹಿತದೃಷ್ಟಿಯಿಂದ ದುರುದ್ದೇಶದ ಆನ್ಲೈನ್ ವಿಚಾರಗಳನ್ನು ಸರ್ಕಾರ ನಿರ್ಬಂಧಿಸಬಹುದಾಗಿದೆ. ಸರ್ಕಾರದ ನೀತಿಗಳು ನ್ಯಾಯಯುತವಾಗಿದ್ದು, ಮುಕ್ತ ಮತ್ತು ವಿಶ್ವಾಸಾರ್ಹ ಅಂತರ್ಜಾಲವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  ನ್ಯೂಸ್ 13

  Share This
  300x250 AD
  300x250 AD
  300x250 AD
  Leaderboard Ad
  Back to top