ಯಲ್ಲಾಪುರ: ತಾಲೂಕಿನಲ್ಲಿ ಗುರುವಾರ 9 ಜನರಿಗೆ ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಅವರಲ್ಲಿ 4 ಮಂದಿ ಯಲ್ಲಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಕೋವಿಡ್ ಕೇರ್ ಸೆಂಟರ್ ನಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ 4 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.
ಮತ್ತು 14 ಮಂದಿ ಗುಣಮುಖರಾಗಿದ್ದಾರೆ.
ತಾಲೂಕಿನಲ್ಲಿ ಇಲ್ಲಿಯವರೆಗೆ 3924ಮಂದಿಗೆ ಕರೋನಾ ಸೋಂಕು ತಗುಲಿದ್ದು 3860 ಮಂದಿ ಗುಣ ಮುಖ ರಾಗಿದ್ದಾರೆ.ಒಟ್ಟೂ 34 ಮಂದಿ ಸಾವನ್ನಪ್ಪಿದ್ದಾರೆ.
ಗುರುವಾರ ತಾಲೂಕಿನಲ್ಲಿ ಒಟ್ಟೂ 306 ಮಂದಿಗೆ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಅವುಗಳಲ್ಲಿ ತಾಲೂಕಾಸ್ಪತ್ರೆಯಲ್ಲಿ 38, ಮಂಚೀಕೇರಿ ಆಸ್ಪತ್ರೆಯಲ್ಲಿ 25, ಚವತ್ತಿಯಲ್ಲಿ 11, ಕಿರವತ್ತಿಯಲ್ಲಿ 80, ವಜ್ರಳ್ಳಿಯಲ್ಲಿ 54, ನಂದೊಳ್ಳಿಯಲ್ಲಿ 63, ಕುಂದರಗಿಯಲ್ಲಿ 27 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ.