ಮುಂಡಗೋಡ: ಬುಧವಾರ ಬೆಂಗಳೂರಿನಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಎರಡನೇ ಬಾರಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹೆಬ್ಬಾರ ಅಭಿಮಾನಿಗಳು ಮತ್ತು ಬಿಜೆಪಿ ಮುಖಂಡರು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿ ಜಯಘೋಶ ಮೊಳಗಿಸಿದರು.
ಬಿಜೆಪಿ ಮುಖಂಡರಾದ ಸಿದ್ದು ಹಡಪದ ಭರತರಾಜ ಹದಳಗಿ, ಗಣೇಶ ಶಿರಾಲಿ, ರಾಮಣ್ಣಾ ವಾಲ್ಮೀಕಿ, ಪ್ರಸನ್ನ ಲಮಾಣೆ, ಮಂಜುನಾಥ ರೇವಣಕರ, ಮಹೇಶ ಹಡಪದ, ಕಲ್ಲಪ್ಪ ಸುಣಗಾರ, ಪಕ್ಕಿರೇಶ ತಾವರಗೇರಿ, ಜಗದೀಶ ಶೆಟ್ಟರ, ಪ್ರಶಾಂತ ಲಮಾಣಿ, ಯಲ್ಲಪ್ಪ, ಅಶೋಕ ಮುಂತಾದವರು ಉಪಸ್ಥಿತರಿದ್ದರು.