eUK ವಿಶೇಷ: ತಮ್ಮ ಕಲೆ ಹಾಗು ಪ್ರತಿಭೆಯಿಂದಾಗಿ ಸಿದ್ಧಿ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಪ್ರಶಾಂತ್ ಸಿದ್ಧಿಯ ಹೆಸರು ರಾಜ್ಯದಲ್ಲಿ ಬಹುತೇಕರಿಗೆ ಗೊತ್ತಿದೆ.
ಈಗ ಇದೇ ಸಮುದಾಯಕ್ಕೆ ಸೇರಿದ ಮಂಚಿಕೇರಿಯ ಸಿದ್ಧಿ ಮಹಿಳೆಯರು ದುನಿಯಾ ವಿಜಿ ಅಭಿನಯದ ‘ ಸಲಗ ‘ ಚಿತ್ರದಲ್ಲಿ ಹಾಡೊಂದನ್ನು ಹಾಡಿ ನೃತ್ಯ ಮಾಡಿರುವ ಪ್ರಮೋಷನಲ್ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗೀತಾ ಸಿದ್ಧಿ ಹಾಗೂ ಗಿರಿಜಾ ಸಿದ್ಧಿ ಹಾಡಿರುವ ಪ್ರಮೋಷನಲ್ ಸಾಂಗ್ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
‘ಕಾ ಚಲಿಗೇ.. ಬೆಂಗಳೂರು ದೇಖನಿಖೊ’ ಎಂದು ಸಿದ್ಧಿ ಬಾಷೆಯಲ್ಲಿ ಹಾಡಿರುವ ‘ಟಿನಿಂಗ ಮಿನಿಂಗ ಟಿಶ್ಶಾ’ ಹೆಸರಿನ ರ‌್ಯಾಪ್ ಸಾಂಗ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ‘
‘ವಿನಸ್ ಎಂಟರ್ಟೇನರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ದುನಿಯಾ ವಿಜಿ, ಡಾಲಿ ಧನಂಜಯ್, ಸಂಜನಾ ಆನಂದ್, ಮುಂತಾದವರು ನಟಿಸಿದ್ದು, ಚರಣ್ ರಾಜ್ ಸಂಗೀತ ನೀರ್ದೇಶನ ಮಾಡಿದ್ದಾರೆ.
https://youtu.be/tGyLZ4bVR20 ಈ ಲಿಂಕ್‌ನಲ್ಲಿ ಹಾಡು ಲಭ್ಯವಿದ್ದು ಈಗಾಗಲೇ ಹಾಡನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.