ಹೊನ್ನಾವರ: ಜಿಲ್ಲೆಯಲ್ಲಿ ಕರೋನಾ ಸೋಂಕಿನಲ್ಲಿ ಮತ್ತೆ ಏರಿಕೆಯಾಗಿದ್ದು ಗುರುವಾರ ಒಟ್ಟೂ 67 ಕರೋನಾ ಪಾಸುಟಿವ್ ಕೇಸ್ ದಾಖಲಾಗಿದ್ದು ಒಂದು ಸಾವು ಸಂಭವಿಸಿದೆ.
ಜಿಲ್ಲಾ ಹೆಲ್ತ್ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 6, ಅಂಕೋಲಾದಲ್ಲಿ 5, ಕುಮಟಾದಲ್ಲಿ 15, ಹೊನ್ನಾವರ 13, ಭಟ್ಕಳ 8, ಶಿರಸಿ 13, ಸಿದ್ದಾಪುರ 1, ಯಲ್ಲಾಪುರ 5, ಹಾಗೂ ಜೊಯಿಡಾದಲ್ಲಿ 1 ಪಾಸಿಟಿವ್ ದಾಖಲಾಗಿದೆ. ಹೊನ್ನಾವರದಲ್ಲಿ ಒಬ್ಬರು ಕರೊನಾದಿಂದ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಒಟ್ಟೂ 486 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 60 ಮಂದಿ ಆಸ್ಪತ್ರೆಯಲ್ಲಿ ಹಾಗೂ 426 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಾದ್ಯಂತ ಗುರುವಾರ 67 ಮಂದಿ ಗುಣಮುಖರಾಗಿದ್ದು ಅವುಗಳಲ್ಲಿ ಕಾರವಾರ 8, ಅಂಕೋಲಾ 5, ಕುಮಟಾ 18, ಹೊನ್ನಾವರ 11, ಭಟ್ಕಳ 2, ಶಿರಸಿ 5, ಸಿದ್ದಾಪುರ 4, ಯಲ್ಲಾಪುರ 9 ಹಾಗೂ ಮುಂಡಗೋಡಿನಲ್ಲಿ 5 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 53,492 ಕರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 52,270 ಮಂದಿ ಗುಣಮುಖರಾಗಿದ್ದಾರೆ. ಹಾಗು ಒಟ್ಟೂ 736ಮಂದಿ ಸಾವನ್ನಪ್ಪಿದ್ದಾರೆ.