
ಯಲ್ಲಾಪುರ: ಈ ಭಾರಿಯ ಸ್ವಾತಂತ್ರ್ಯ ಉತ್ಸವ ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತಾಲೂಕಾ ಆಡಳಿತ ನಿರ್ಧಾರ ಮಾಡಿದೆ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಹೇಳಿದರು.
ತಹಶೀಲ್ದಾರ ಕೃಷ್ಣಕಾಮಕರ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಈ ಮೇಲಿನ ನಿರ್ಣಯ ಕೈಗೊಂಡಿದೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪೆÇೀಲೀಸ್ ಗ್ರಹ ರಕ್ಷಕ ದಳ ಸೇರಿದಂತೆ ನೂರು ಸಂಖ್ಯೆ ದಾಟದಂತೆ ಎಚ್ಚರವಹಿಸಲು ತಹಶೀಲ್ದಾರ ಸೂಚಿಸಿದರು.
ಸಭೆಯಲ್ಲಿ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಎನ್.ಆರ್ ಹೆಗಡೆ, ಪ.ಪಂ ಮುಖ್ಯಾಧಿಕಾರಿ ಅರುಣ ನಾಯಕ, ಪ.ಪಂ ಅದ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಲಿ ಪಾಠಣಕರ, ನಾಗರಿಕ ವೇದಿಕೆ ಅಧ್ಯಕ್ಷರಾದ ರಾಮು ನಾಯಕ, ಪ್ರಕಾಶ ನಾಯಕ, ಸಿ ಆರ್ ಪಿ ಸಂಜೀವ ಹೊಸಕೇರಿ, ಭಾರತ್ ಸೇವಾದಳದ ಅಧ್ಯಕ್ಷ ಎಂ ಆರ್ ಹೆಗಡೆ ಸೇರಿದಂತೆ ಹಲವು ಗಣ್ಯರು ಅಧಿಕಾರಿಗಳು ಭಾಗವಹಿಸಿದ್ದರು.