ಮುಂಡಗೋಡ: ಸರ್ಕಾರದಿಂದ 22ಲಕ್ಷ ರೂಪಾಯಿ ಮನೆ ಕಟ್ಟಲು ಅದರಲ್ಲಿ 18 ಲಕ್ಷ ರೂಪಾಯಿ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯಿಂದ 2ಲಕ್ಷ ಹಣ ಪಡೆದು ಮರಳಿ ಕೊಡದೆ ಮೋಸ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ಗಣೇಶಪುರ ಗ್ರಾಮದ ಈರಪ್ಪ ಬೋವಿವಡ್ಡರ ಎಂಬುವವನು ಮೋಸ ಮಾಡಿದ ವ್ಯಕ್ತಿಯಾಗಿದ್ದಾನೆ. ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಡಿ ಗ್ರಾಮದ ರಾಜು ಲಮಾಣೆ ಅವರಿಗೆ ಆರೋಪಿತ ಈರಪ್ಪ ಈತನು ಸರ್ಕಾರದಿಂದ 22ಲಕ್ಷ ರೂಪಾಯಿ ಮನೆಯನ್ನು ಕಟ್ಟಲು ಕೊಡಿಸುವುದಾಗಿ ಅದರಲ್ಲಿ 18ಲಕ್ಷ ರೂಪಾಯಿ ಸಬ್ಸಿಡಿ ಮಾಡಿಸಿಕೊಡುವುದಾಗಿ ನಂಬಿಸಿ 2ಲಕ್ಷ ರೂಪಾಯಿ ಹಣವನ್ನು ಪಡೆದು ಹಣವನ್ನು ಮರಳಿ ನೀಡದೆ ಮನೆಯನ್ನು ಕಟ್ಟಲು ಸಾಲವನ್ನು ಮಾಡಿಸಿ ಕೊಡದೆ ನಂಬಿಸಿ ಮೋಸ್ ಮಾಡಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ರಾಜು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿದ್ದಾರೆ.