• Slide
  Slide
  Slide
  previous arrow
  next arrow
 • ಅಮೇರಿಕಾದ ‘ಹವ್ಯಕ ಅಸೋಸಿಯೇಶನ್’ ಸ್ವರ್ಣವಲ್ಲೀ ಮೂಲಕ ನೆರವಿನ ಹಸ್ತ

  300x250 AD

  ಶಿರಸಿ: ಅತಿಯಾದ ಮಳೆಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿನ ಉತ್ತರ ಕನ್ನಡದ ಕಳಚೆ ಸೇರಿದಂತೆ ಇತರ ಪ್ರದೇಶದ ರೈತರ ನೆರವಿಗೆ ಅಮೇರಿಕಾದ ಹವ್ಯಕ ಅಸೋಸಿಯೇಶನ್ ಸ್ವರ್ಣವಲ್ಲೀ ಸಂಸ್ಥಾನದ ಮೂಲಕ ನೆರವಿನ ಹಸ್ತ ಚಾಚಿದೆ.


  ಈ ಕುರಿತು ಮಾಹಿತಿ ನೀಡಿರುವ, ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೇರಿಕಾ ಹವ್ಯಕ ಅಸೋಶಿಯನ್ ಭೈರುಂಬೆ ಶಾರದಾಂಬಾ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ಇರುವ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 7ವರೆ ಸಾವಿರ ಡಾಲರ್ ನೆರವು ನೀಡಿದೆ. ಭಾರತದ ರೂಪಾಯಿ ಮೊತ್ತದಲ್ಲಿ ಸುಮಾರು 5ವರೆ ಲಕ್ಷ ರೂ. ಆಗಲಿದ್ದು, ಅಮೇರಿಕಾದ ಹವ್ಯಕ ಸದಸ್ಯರು ಸಂಗ್ರಹಿಸಿ ನೀಡಿದ ದೇಣಿಗೆ ಇದಾಗಿದೆ ಎಂದಿದ್ದಾರೆ.

  300x250 AD


  ಈಚೆಗಿನ ಅತಿವೃಷ್ಟಿಯಿಂದ ಉಂಟಾದ ಹಾನಿ ನೋಡಿದರೆ ಮನ ಕಲಕುವಂತೆ ಇದೆ. ಹಾನಿಯ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ನೋವುಂಟಾಗುತ್ತಿದೆ. ಹಾನಿಗೆ ಒಳಗಾದ ಕುಟುಂಬಗಳಿಗೆ ಶ್ರೀಮಠ ನೆರವಾಗಲು ಮುಂದಾಗಿರುವದು ನಿಜಕ್ಕೂ ಶ್ಲಾಘನೀಯ. ಈ ದೇಣಿಗೆಯನ್ನ ಪ್ರವಾಹದ ಸಂಕಷ್ಟದ ನಿವಾರಣೆಗೆ ಬಳಸಿಕೊಳ್ಳಬಹುದು ಎಂದು ಅಮೇರಿಕಾ ಹವ್ಯಕ ಅಸೋಸಿಯೇಶನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top