
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಮತ್ತೊಮ್ಮೆ ಸಚಿವರಾದ ಬಳಿಕ ಆ.6 ಶುಕ್ರವಾರದಂದು ಯಲ್ಲಾಪುರಕ್ಕೆ ಬರಲಿದ್ದಾರೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾದ ಬಳಿಕ ಪ್ರಥಮ ಬಾರಿ ಕ್ಷೇತ್ರಕ್ಕೆ ಆಗಮಿಸಲಿದ್ದು, ನಾಳೆ ಸಂಪೂರ್ಣ ದಿನ ಸಚಿವರು ಕಾರ್ಯಕರ್ತರ ಭೇಟಿಗೆ ಯಲ್ಲಾಪುರದ ಕಾರ್ಯಾಲಯದಲ್ಲಿ ಲಭ್ಯವಿರುತ್ತಾರೆ ಎಂದು ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.