• Slide
    Slide
    Slide
    previous arrow
    next arrow
  • ಕಡಲೆಬೇಳೆ ರುಚಿಕರ ಇಡ್ಲಿ ಮಾಡಿ ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿ: 150 ಗ್ರಾಂ ಕಡಲೇಬೇಳೆ, 100 ಗ್ರಾಂ-ಅಕ್ಕಿ, 2 ಹಸಿಮೆಣಸು, 1 ಟೇಬಲ್ ಸ್ಪೂನ್ ಶುಂಠಿ ತುರಿ, 2-ಒಣ ಮಣಸು, ಟೀ ಸ್ಪೂನ್- ಅರಿಶಿನ, 1 ಟೀ ಸ್ಪೂನ್ ಸಾಸಿವೆ, 8 ಎಸಳು-ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು,

    300x250 AD

    ಮೊದಲಿಗೆ ಅಕ್ಕಿ ಮತ್ತು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ 4 ಗಂಟೆಗಳ ಕಾಲ ನೆನಸಿಡಿ. ನಂತರ ಇವೆರಡನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿಟ್ಟುಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಅದನ್ನು ಹಾಗೇ ಮುಚ್ಚಿಡಿ.
    ನಂತರ ಒಂದು ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಅರಿಶಿನ, ಶುಂಠಿ ತುರಿ, ಚಿಕ್ಕದಾಗಿ ಕತ್ತರಿಸಿಕೊಂಡ ಒಣ ಮೆಣಸು, ಕರಿಬೇವು ಹಾಕಿ, ಸಾಸಿವೆ ಸಿಡಿದಾಗ ಇದನ್ನು ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ. ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟನ್ನು ಇಡ್ಲಿ ತಟ್ಟೆಗೆ ಹಾಕಿ ಬೇಯಿಸಿಕೊಳ್ಳಿ. ಸಾಂಬಾರು ಅಥವಾ ಚಟ್ನಿ ಜತೆ ಈ ಸವಿಯಿರಿ.

    Share This
    300x250 AD
    300x250 AD
    300x250 AD
    Leaderboard Ad
    Back to top