ಭಟ್ಕಳ: ಇಲ್ಲಿನ ಮರ್ಡೇಶ್ವರದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ ಗಿಲ್ನಟ್ ದೋಣಿ ಮಗುಚಿದ ಕಾರಣ 7 ಮಂದಿ ಮೀನುಗಾರರು ಅಪಾಯದ ಸ್ಥಿತಿಯಲಿದ್ದಾರೆ.
ಜನಾರ್ದನ ಹರಿಕಾಂತ ಎಂಬುವವರಿಗೆ ಸೇರಿದ ಜಲಗಂಗಾ ದೋಣಿ ಮುರ್ಡೇಶ್ವರದ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಮಗುಚಿದೆ. ಮೀನುಗಾರರು ತಕ್ಷಣವೇ ಸಮುದ್ರಕ್ಕೆ ಹಾರಿಕೊಂಡು ನಂತರ ಮಗುಚಿದ ದೋಣಿಯ ಮೇಲೆ ಕುಳಿತು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ದೋಣಿಯಲ್ಲಿ 7 ಮೀನುಗಾರರು ಇದ್ದರು ಎಂದು ಹೇಳಲಾಗಿದೆ. ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸುತ್ತಿರುವುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಮತ್ತೊಂದು ಬೋಟ್ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ಮುರ್ಡೇಶ್ವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.