Slide
Slide
Slide
previous arrow
next arrow

ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ‘ಇಂಡಿಯಾ ಡಿಜಿಟಲ್ ಆಗಿದೆಯೇ ?

300x250 AD

ಜನಧ್ವನಿ: ಇಂಡಿಯಾ ಡಿಜಿಟಲ್ ಅಂತ ಹೇಳ್ತಾರೆ, ಶಾಲೆಗಳಂತೂ ಡಿಜಿಟಲ್ ಆಗಿದ್ದು ಹೌದು ಹೌದು ಯಾಕೆಂದರೆ ತರಗತಿಗಳು ಪ್ರಾರಂಭವಿಲ್ಲ. ಆನ್ಲೈನ್ ತರಗತಿಗಳು, ಹಣಕಾಸು ವ್ಯವಹಾರಗಳು ಡಿಜಿಟಲ್ ಆಗಿದೆ. ಹೀಗೆ ಅನೇಕ ವಿಷಯಗಳು ಡಿಜಿಟಲ್ ಆಗಿ ಪರಿವರ್ತನೆ ಆದಂತಹ ಜಾಹಿರಾತುಗಳು, ಸುದ್ದಿಗಳು ಇದೆ. ಅದಕ್ಕೆ ಈಗ ಸೇರ್ಪಡೆಗೊಂಡಿದ್ದು e rupi.

ಈ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಠಕ್ಕರು, ಹಣ ಕದಿಯುವದು ಹೇಗೆ ಎನ್ನುವುದರಲ್ಲಿ ಕೈಚಳಕ ತೋರಿಸುತ್ತಿದ್ದಾರೆ.ಬಿಟ್ಟರೆ ಅದಕ್ಕೆ ಡಿಜಿಟಲ್ ದೂರು ನೀಡುವುದು ಹೇಗೆ ಎನ್ನುವುದು ಗ್ರಾಹಕನಿಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದರೂ ದೂರು ನೀಡಬೇಕಾದರೆ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಇದು ಸಾಧ್ಯವಾಗುವ ದಿನಗಳು ಕಡಿಮೆ.

ಅದೆಲ್ಲ ಏನೇ ಇದ್ದರೂ ಡಿಜಿಟಲ್ ಇಂಡಿಯಾ ಅಂತ ಹೇಳುವ ಮೊದಲು ಪ್ರತಿ ಟೆಲಿಕಮ್ಯುನಿಕೇಶನ್ ವ್ಯವಸ್ಥೆಯ ಪೂರೈಕೆದಾರರು ಹೇಳಿದ ವೇಗದ, ಶಿಸ್ತುಬದ್ಧ, ನಿರಂತರ ನೆಟ್ವರ್ಕ್ ಪ್ರತಿ ಹಳ್ಳಿಹಳ್ಳಿಗೂ ಭಾರತ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ನೀಡಲಿ. ನೆಟ್ವರ್ಕ್ ಸಮಸ್ಯೆಗಳನ್ನು ಸುಧಾರಿಸಿದ ಹೊರತು ಡಿಜಿಟಲ್ ಇಂಡಿಯಾದ ಮುಂದಿನ ಹೆಜ್ಜೆ ಇಡುವುದು ಬೇಡ.

300x250 AD

ಭಾರತ 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಮತ್ತೇನು ಮಾಡದೇ ಇದ್ದರೂ ಅಡ್ಡಿಲ್ಲ ಭಾರತ್ ಸಂಚಾರ್ ನಿಗಮದ ಉತ್ತಮ ಆರೋಗ್ಯವಾಗಿರುವಂತೆ, ಉತ್ತಮ ನೆಟ್ವರ್ಕ್, ಅವಶ್ಯಕ ವೇಗದ ನೆಟ್ವರ್ಕ್, ನಿರಂತರ ನೆಟ್ವರ್ಕ್ ಕೊಡುವ ಒಂದು ಕೆಲಸವನ್ನಾದರೂ ಕೇಂದ್ರ ಸರಕಾರ ಖಚಿತವಾಗಿ 2021ರ ಅಗಸ್ಟ್ 15 ರಿಂದ 2022ರ ಅಗಸ್ಟ್ 15 ರೊಳಗೆ ಮಾಡಬಹುದಾಗಿದೆ.

ಡಿಜಿಟಲ್ ವ್ಯವಸ್ಥೆಯನ್ನು ನೀಡುತ್ತಿರುವ ಖಾಸಗಿ ಸ್ವಾಮ್ಯದ ಕಂಪನಿಗಳು ಅವರು ಹೇಳಿದಂತೆ ನೆಟ್ವರ್ಕ್ ಪೂರೈಕೆ ಮಾಡದಿದ್ದಲ್ಲಿ ಖಂಡಿತವಾಗಿ telephone regulatory authority of India ದಂಡ ವಿಧಿಸುವುದಷ್ಟೇ ಅಲ್ಲ ಅಷ್ಟೇ ವೇಳೆಯ ಉಚಿತ ಸೇವೆಯನ್ನು ನೀಡುವಂತೆ ಆದೇಶಸಬೇಕಿದೆ.

ಡಾ. ರವಿಕಿರಣ ಪಟವರ್ಧನ, ಶಿರಸಿ

Share This
300x250 AD
300x250 AD
300x250 AD
Back to top