• first
    second
    third
    previous arrow
    next arrow
  • ಟೊಕಿಯೋ ಓಲಿಂಪಿಕ್ಸ್: ಪುರುಷರ ಹಾಕಿ ತಂಡಕ್ಕೆ ಕಂಚು

    300x250 AD

    ಟೋಕಿಯೋ: ಜಪಾನ್‍ನ ಟೊಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದಿದ್ದಾರೆ.
    ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಪದಕ ಬಂದಿದೆ. ಈ ಪಂದ್ಯದಲ್ಲಿ ಜರ್ಮನಿ ತಂಡವನ್ನು ಪರಾಜಯಗೊಳಿಸಿದ ಭಾರತದ ಹಾಕಿ ಟೀಂ ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದೆ.
    ಈ ಪಂದ್ಯವನ್ನು ಭಾರತೀಯ ತಂಡ 5-4 ಗೋಲುಗಳ ಅಂತರದಲ್ಲಿ ಜಯಿಸಿದೆ. ಆ ಮೂಲಕ 1980 ರ ಬಳಿಕ ಇದೇ ಮೊದಲ ಬಾರಿಗೆ ಒಲಿಂಪಿಕ್‍ನ ಹಾಕಿಯಲ್ಲಿ ಭಾರತಕ್ಕೆ ಪದಕ ಬಂದಿದೆ.
    ಪ್ರಧಾನಿ ಮೋದಿ ಅವರು ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ಅರ್ಪಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನ ಸ್ಮರಣೆಯಲ್ಲಿ ಉಳಿಯುವ ಐತಿಹಾಸಿಕ ದಿನ. ಮನೆಗೆ ಕಂಚು ತಂದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಈ ತಂಡದ ಬಗ್ಗೆ ದೇಶವೇ ಹೆಮ್ಮೆ ಪಡುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top