
ಸಿದ್ದಾಪುರ/ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ 4 ಕೊರೊನಾ ಕೇಸ್ ದಾಖಲಾಗಿದ್ದು, ಒಟ್ಟೂ 4229 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.
ತಾಲೂಕಾಡಳಿತ ನೀಡಿದ ವರದಿಯಂತೆ ಮಣ್ಮನೆಯಲ್ಲಿ 1, ಅಕ್ಕಂಜಿ ಗೋಳಗೋಡಿನಲ್ಲಿ 1, ಕಾನಳ್ಳಿಯಲ್ಲಿ 1, ಹಾರೆಕೊಪ್ಪದಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ. ಇಂದು 4 ಮಂದಿ ಗುಣಮುಖರಾಗಿದ್ದು, ಒಟ್ಟೂ 38 ಮಂದಿ ಸಾವನ್ನಪ್ಪಿದ್ದಾರೆ. ತಾಲೂಕಿನಲ್ಲಿ ಸದ್ಯ 12 ಕೇಸ್ ಆ್ಯಕ್ಟಿವ್ ಕೇಸ್ ಇದೆ. ಇದರಲ್ಲಿ 12 ಮಂದಿ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲಿ ಇಂದು ಒಂದು ಕೇಸ್ ದೃಢಪಟ್ಟಿದ್ದು, ಈವರೆಗೆ 3915 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಇಂದು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವರದಿಯಾದಂತೆ ನಂದೊಳ್ಳಿ ವ್ಯಾಪ್ತಿಯಲ್ಲಿ (ನಗರ ಸೇರಿ) 1 ಕೇಸ್ ದೃಢಪಟಟಿದೆ. ತಾಲೂಕಿನಲ್ಲಿ ಈವರೆಗೆ 3846 ಮಂದಿ ಗುಣಮುಖರಾಗಿದ್ದು, 34 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 35 ಕೇಸ್ ಸಕ್ರಿಯವಾಗಿದೆ.