
ಶಿರಸಿ: ದಿ. ದೀಪಕ ಹೊನ್ನಾವರರವರ 8 ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಟೆಂಪೋ ಸ್ಟ್ಯಾಂಡಿನಲ್ಲಿ ಇವರ ಭಾವಚಿತ್ರ ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದ ಅವರ ಸಹೋದರಿ ಸುಷ್ಮಾ ರಾಜಗೋಪಾಲ್ “ದೀಪಕಣ್ಣ ನಮ್ಮನ್ನಗಲಿ ಎಂಟು ವರ್ಷಗಳಾದರೂ ಅವರ ನೆನಪು ನಮ್ಮನ್ನು ಸದಾ ಜಾಗ್ರತರನ್ನಾಗಿಸುತ್ತದೆ. ಬಡವರ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡು, ಬಡವರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರನ್ನು ಬೆಂಬಲಿಸುವ ಎಲ್ಲರಿಗೆ ನಾವು ಕೃತಜ್ಞರಾಗಿರುತ್ತೇವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಪ್ರಯತ್ನ ಮಾಡುತ್ತ, ಜನಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು, ಅವರ ನೆನಪನ್ನು ಚಿರಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಮುನ್ನಡೆಯುತ್ತೇವೆ ಎಂದರು.
ನಂತರ ಅಗತ್ಯವಿರುವ ಜನರಿಗೆ ಆಹಾರ ವಸ್ತುಗಳ ಕಿಟ್ ನ್ನು ವಿತರಿಸದರು. ಈ ಸಂದರ್ಭದಲ್ಲಿ ದಿ. ದೀಪಕ ಹೊನ್ನಾವರ ರವರ ಪತ್ನಿ ಸರಸ್ವತಿ ಹೊನ್ನಾವರ, ಪುತ್ರಿ ಸ್ವಾತಿ,ಸಹೋದರ ಸೂರ್ಯಪ್ರಕಾಶ ಹೊನ್ನಾವರ, ಸುಮಾ ಉಗ್ರಾಣಕರ್, ಜಿಎನ್ ಹೆಗಡೆ ಮುರೇಗಾರ, ಸತೀಶ್ ನಾಯ್ಕ್, ಪ್ರದೀಪ ಶೆಟ್ಟಿ, ರಾಜು ಉಗ್ರಾಣಕರ್, ಅರವಿಂದ ನೇತ್ರೇಕರ್, ರಮೇಶ ದುಭಾಶಿ, ಶ್ರೀಕಾಂತ ತಾರೀಬಾಗಿಲ, ಕುಮಾರ್ ಬೋರ್ಕರ್, ಶಂಕರ ಗುಡ್ಡದಮನೆ, ಮಾಲತಿ ಮರಾಠಿ, ಮಹೇಶ ಶೆಟ್ಟಿ, ಸ್ವಾಮಿ, ಸುಧೀರ, ಸೈಮನ್ ಡಯಾಸ್, ರಾಮು ಆಚಾರಿ, ಸುಧಾಕರ ಚಾಂತಾರ, ರಾಜು ಬಾಪಟ್, ಸಮದ್, ಅಬ್ದುಲ್ ಖಾದರ್, ಬಿದ್ರಕಾನ ಮಂಜು, ಬಾಬು ತುಮಕೂರು, ಪಾಟೀಲ ಮುಂತಾದವರೊಂದಿಗೆ ಅಪಾರ ಸಂಖ್ಯೆಯಲ್ಲಿ ದೀಪಕ ಹೊನ್ನಾವರ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಅಲೆಕ್ಸ್ ಮತ್ತು ಕೃಷ್ಣಮೂರ್ತಿ ಹುಸರಿ ಸಂಘಟಿಸಿದ್ದು, ನಂತರ ಎಮ್‍ಈಎಸ್ ನರ್ಸಿಂಗ್ ವಿದ್ಯಾಲಯಕ್ಕೆ ತೆರಳಿ ದಿವಂಗತರ ಸ್ಮರಣೆಯ ನೆನಪಿನಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.